ಮಕ್ಕಳ ದಿನದಂದೇ ಇದೆಂತಾ ಘೋರ! ಇಬ್ಬರು ಮಕ್ಕಳಿಗೆ ವಿಷವಿಕ್ಕಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ತನ್ನಿಬ್ಬರು ಮಕ್ಕಳಿಗೆ ವಿಷವಿಕ್ಕಿದ ತಾಯಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಮಂಡ್ಯ: ತನ್ನಿಬ್ಬರು ಮಕ್ಕಳಿಗೆ ವಿಷವಿಕ್ಕಿದ ತಾಯಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ನಡೆದಿದೆ.ಕುಟುಂಬ ಕಲಹದ ಕಾರಣ ಈ ಘಟನೆ ನಡೆದಿರಬಹುದೆಂದು ಶಂಕಿಸಲಾಗಿದ್ದು ಪ್ರಕರಣದಲ್ಲಿ  ಪುನೀತ್(2)ಎಂಬ ಬಾಲಕ ಸಾವನ್ನಪ್ಪಿದ್ದಾನೆ.

ಮಳವಳ್ಳಿಯ  ದಳವಾಯಿ ಕೋಡಿಹಳ್ಳಿಯಲ್ಲಿ ನಡೆದ ಘಟನೆಯಲ್ಲಿ ತಾಯಿ ಸೌಜನ್ಯ(24)  ಹಾಗೂ ಪುತ್ರ ಲೋಹಿತ್ (1) ಸ್ಥಿತಿ ಗಂಭೀರವಾಗಿದ್ದು ಅವರನ್ನು ಮಿಮ್ಸ್‌ನಲ್ಲಿ ದಾಕಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಗ್ರಾಮದ ಶಿವಪ್ಪ ಹಾಗೂ ಸೌಜನ್ಯ ಕಳೆದ ಆರು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು.ಆದರೆ ಸೌಜನ್ಯಗೆ ತನ್ನ ಅತ್ತೆ ತನ್ನ ಮಕ್ಕಳೊಡನೆ ಮಾತನಾಡುವುದು, ಆಟವಾಡುವುದು ಇಷ್ಟವಿರಲಿಲ್ಲ. ಇದಕ್ಕಾಗಿ ಅತ್ತೆ-ಸೊಸೆ ನಡುವೆ ಆಗಾಗ ಜಗಳವಾಗುತ್ತಿತ್ತು.ಬುಧವಾರ ಸಹ ಅದೇ ಕಾರಣದಿಂಡ ಜಗಳವಾಗಿದ್ದು ಸೌಜನ್ಯ ಆಕ್ರೋಶಗೊಂಡು ತನ್ನಿಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವಿಷ ಕುಡಿದು ಒದ್ದಾಡುತ್ತಿದ್ದ ಮೂವರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಸಹ ಒಂದು ಮಗು ಚಿಕಿತ್ಸೆ ಫಲಿಸದೆ ಅಸುನೀಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com