ರಾಜ್ಯ

ಒಂದೆಡೆ ಪರಿಸರ ಪ್ರೇಮಿಗಳ ವಿರೋಧ: ಇನ್ನೊಂದೆಡೆ ಶರಾವತಿ ಜಲ ವಿದ್ಯುತ್ ಯೋಜನೆಗೆ ರಾಜ್ಯ ಸರ್ಕಾರ ಅಸ್ತು

ಒಂದೆಡೆ ಪರಿಸರ ಪ್ರೇಮಿಗಳ ವಿರೋಧ: ಇನ್ನೊಂದೆಡೆ ಶರಾವತಿ ಜಲ ವಿದ್ಯುತ್ ಯೋಜನೆಗೆ ರಾಜ್ಯ ಸರ್ಕಾರ ಅಸ್ತು
ಶರಾವತಿ ನದಿ ತೀರ
Published On :

ಬೆಂಗಳೂರು: ಶರಾವತಿ ನದಿ ಕಣಿವೆಯ ಮಧ್ಯದಲ್ಲಿ ಉದ್ದೇಶಿತ 2 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಜಲವಿದ್ಯುತ್ ಯೋಜನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ. 

ಈ ಯೋಜನೆಗೆ ಮೊದಲು ಚಾಲನೆ ಸಿಕ್ಕಿದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ. ಇದನ್ನೀಗ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದುವರಿಸಲು ತೀರ್ಮಾನಿಸಿದೆ. ಸ್ಥಳೀಯ ಜನರು, ಪರಿಸರವಾದಿಗಳು ಮತ್ತು ಅರಣ್ಯಾಧಿಕಾರಿಗಳ ತೀವ್ರ ವಿರೋಧದ ನಡುವೆ ಕೂಡ ಯೋಜನೆಯನ್ನು ಮುಂದುವರಿಸುತ್ತಿರುವುದು ಸಾಮಾನ್ಯ ಜನತೆಯಲ್ಲಿ ಆತಂಕವನ್ನುಂಟುಮಾಡಿದೆ.


ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಅರಣ್ಯ ವಿಭಾಗಗಳಲ್ಲಿ 877.507 ಹೆಕ್ಟೇರ್ ಅರಣ್ಯ ಭೂಮಿಯ ಭೌಗೋಳಿಕ ತಾಂತ್ರಿಕ ಸಮೀಕ್ಷೆ ನಡೆಸಿ ಶರಾವತಿ ಕಣಿವೆಯಲ್ಲಿರುವ ಸಿಂಹ ಮಕಾಕ್ ಅಭಯಾರಣ್ಯದಲ್ಲಿ ಯೋಜನೆಗೆ ಕೇಂದ್ರದಿಂದ ಒಪ್ಪಿಗೆ ಸಿಗಲು ರಾಜ್ಯ ಸರ್ಕಾರ ಕಾಯುತ್ತಿದೆ.ಈ ಸಮೀಕ್ಷೆಯ ನಂತರವಷ್ಟೇ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದೇ, ಬೇಡವೇ ಎಂಬುದಕ್ಕೆ ಉತ್ತರ ಸಿಗಲಿದೆ.


ಈ ಉದ್ದೇಶಿತ ಯೋಜನೆ ಅಭಯಾರಣ್ಯದ ಪ್ರಮುಖ ಪ್ರದೇಶದ ಒಳಗಡೆ ಬರುತ್ತದೆ. 902 ಚದರಡಿ ವಿಸ್ತೀರ್ಣದಲ್ಲಿ ಇದು ಹರಡಿದೆ. ಶರಾವತಿ ಕಣಿವೆ ಎಲ್ ಟಿಎಂ ಅಭಯಾರಣ್ಯ ಕೆಲವು ಅಪರೂಪದ ಪ್ರಬೇಧಗಳಿಗೆ ಸಾಕ್ಷಿಯಾಗಿದೆ. ಅಳಿವಿನಂಚಿನಲ್ಲಿರುವ ಮಕಾಕ್ಗಳು ಮತ್ತು ಮೈರಿಸ್ಟಿಕಾ ಜೌಗು ಪ್ರದೇಶಗಳು ಈ ಪ್ರದೇಶಕ್ಕೆ ನೆಲೆಯಾಗಿದೆ. ಶರಾವತಿ ಜಲವಿದ್ಯುತ್ ಯೋಜನೆ ಕೈಗೊಂಡರ ನೂರಾರು ಎಕರೆ ಹಸಿರು ಅರಣ್ಯಗಳು ನಾಶವಾಗುವುದಲ್ಲದೆ ಗೆರ್ಸೊಪ್ಪಾ ವನ್ಯಜೀವಿ ಶ್ರೇಣಿ ಮತ್ತು ಕಾರ್ಗಲ್ ಶ್ರೇಣಿಗಳಿಗೆ ತೊಂದರೆಯಾಗುತ್ತದೆ ಎಂಬುದು ಪರಿಸರಪ್ರೇಮಿಗಳ ಕೂಗಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.