ಉಡುಪಿ: 4 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ವೃದ್ದ, ಆರೋಪ ಸಾಬೀತು

ನಾಲ್ಕು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ 70 ವರ್ಷದ ವೃದ್ಧನ ಆರೋಪ ಸಾಬೀತಾಗಿರುವುದನ್ನು ಉಡುಪಿ ಪೊಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಪ್ರಕಟಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಉಡುಪಿ:  ನಾಲ್ಕು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ 70 ವರ್ಷದ ವೃದ್ಧನ ಆರೋಪ ಸಾಬೀತಾಗಿರುವುದನ್ನು ಉಡುಪಿ ಪೊಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಪ್ರಕಟಿಸಿದ್ದಾರೆ.

2018ರ ಫೆಬ್ರವರಿಯಲ್ಲಿ ಹೆಬ್ರಿ ಠಾಣಾ ವ್ಯಾಪ್ತಿಯ ನಾಲ್ಕು ವರ್ಷದ, ಅಂಗನವಾಡಿಗೆ ಹೋಗುವ ಮಗುವನ್ನು ಅದೇ ಊರಿನ ಬಸವ (70) ಎಂಬಾತ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕುರಿತಾಗಿ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಬುಧವಾರ ಘೋಷಿಸಲಿದ್ದಾರೆ. ಈತನಿಗೆ ಈ ಹಿಂದೆ ಜಾಮೀನು ಸಿಕ್ಕಿತ್ತಾದರೂ ಮನೆಯವರು ಜಾಮೀನಿಗೆ ಭದ್ರತೆ ನೀಡಲು ನಿರಾಕರಿಸಿದ್ದರು.‌ ಹಾಗಾಗಿ ನ್ಯಾಯಾಂಗ ಬಂಧನದಲ್ಲೇ ಇದ್ದ. ಪೊಕ್ಸೋ ಕಾಯಿದೆಯಡಿ 70 ವರ್ಷದ ವ್ಯಕ್ತಿ ವಿರುದ್ಧ ಆರೋಪ ಸಾಬೀತಾಗಿರುವುದು ಉಡುಪಿಯಲ್ಲಿ ಇದೇ ಮೊದಲು ಎಂದು ಪೋಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com