ಐಟಿ ದಾಳಿ ಮೂಲಕ ನಿಜವಾದ ‘ಸರ್ಜಿಕಲ್‍ ಸ್ಟ್ರೈಕ್’ ಏನೆಂಬುದು ಬಯಲು: ಎಚ್‍ ಡಿಕೆ ವ್ಯಂಗ್ಯ

ಐಟಿ ದಾಳಿ ಕುರಿತು ಸಿಎಂ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದು, ಐಟಿ ದಾಳಿ ಮೂಲಕ ಪ್ರಧಾನಿ ಮೋದಿ ಅವರ ನಿಜವಾದ 'ಸರ್ಜಿಕಲ್‍ ಸ್ಟ್ರೈಕ್' ಏನೆಂಬುದು ಬಯಲಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

Published: 28th March 2019 12:00 PM  |   Last Updated: 28th March 2019 05:02 AM   |  A+A-


PM Modi's

ಸಂಗ್ರಹ ಚಿತ್ರ

Posted By : SVN SVN
Source : UNI
ಬೆಂಗಳೂರು: ಲೋಕಸಭಾ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿರುವಂತೆ ಜೆಡಿಎಸ್ ನಾಯಕರ ಆಪ್ತರ ಮನೆಗಳ ಮೇಲೆ ನಡೆದಿರುವ ಐಟಿ ದಾಳಿ ಕುರಿತು ಸಿಎಂ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದು, ಐಟಿ ದಾಳಿ ಮೂಲಕ ಪ್ರಧಾನಿ ಮೋದಿ ಅವರ ನಿಜವಾದ 'ಸರ್ಜಿಕಲ್‍ ಸ್ಟ್ರೈಕ್' ಏನೆಂಬುದು ಬಯಲಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

ಕರ್ನಾಟಕದಲ್ಲಿ ಇಂದು ಮುಂಜಾನೆ ಆದಾಯ ತೆರಿಗೆ ಅಧಿಕಾರಿಗಳು ಮೈಸೂರು, ಮಂಡ್ಯ. ಬೆಂಗಳೂರು ಮತ್ತು ಶಿವಮೊಗ್ಗದ ಹಲವೆಡೆ ದಾಳಿ ನಡೆಸಿದ್ದು, ಮಂಡ್ಯ ಉಸ್ತುವಾರಿ ಸಚಿವ ಸಿಎಸ್ ಪುಟ್ಟರಾಜು ಅವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಅಂತೆಯೇ ಹಾಸನದಲ್ಲಿ ಸಚಿವ ಎಚ್ ಡಿ ರೇವಣ್ಣ ಅವರ ಆಪ್ತರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇತ್ತ ಶಿವಮೊಗ್ಗದಲ್ಲಿ ಪಿಡಬ್ಲ್ಯುಡಿ ಕಚೇರಿ ಮತ್ತು ಬೆಂಗಳೂರಿನಲ್ಲಿ ಸಿಎಂ ಕುಮಾರಸ್ವಾಮಿ ಆಪ್ತರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಆದಾಯ ತೆರಿಗೆ ಅಧಿಕಾರಿಗಳು ಇಂದು ಮುಂಜಾನೆ ಜೆಡಿಎಸ್‍ ಮುಖಂಡರು ಹಾಗೂ ಗುತ್ತಿಗೆದಾರರು, ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿರುವುದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಆದಾಯ ತೆರಿಗೆ ದಾಳಿ ಮೂಲಕ ಪ್ರಧಾನಮಂತ್ರಿ ಅವರ ನಿಜವಾದ ಸರ್ಜಿಕಲ್‍ ಸ್ಟ್ರೈಕ್‍ ಏನೆಂಬುದು ಬಯಲಾಗಿದೆ ಎಂದು ಹೇಳಿದ್ದಾರೆ. 
  
ಆದಾಯ ತೆರಿಗೆ ಇಲಾಖೆ ಅಧಿಕಾರಿ ಬಾಲಕೃಷ್ಣ ಅವರಿಗೆ ಉನ್ನತ ಸಾಂವಿಧಾನಿಕ ಹುದ್ದೆ ಆಮಿಷ ನೀಡಲಾಗಿದ್ದು, ಅದರಂತೆ, ಮೋದಿಯವರ ಸೂಚನೆಯಂತೆ ಪ್ರತಿಕಾರದ ದಾಳಿಗಳು ನಡೆಯುತ್ತಿವೆ. ಚುನಾವಣೆ ವೇಳೆ, ಆಡಳಿತ ಯಂತ್ರ ಹಾಗೂ ಭ್ರಷ್ಟ ಅಧಿಕಾರಿಗಳನ್ನು ಬಳಸಿಕೊಳ್ಳುವುದರ  ಮೂಲಕ ವಿರೋಧಿಗಳನ್ನು ಹಣೆಯಲು ಪ್ರಯತ್ನಿಸುತ್ತಿರುವುದು ಶೋಚನೀಯ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.  
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp