ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ: 2 ಕ್ಲಬ್ ಗಳಿಗೆ ದಂಡ, ಲೈಸೆನ್ಸ್ ರದ್ದುಗೊಳಿಸಿದ ಬಿಬಿಎಂಪಿ

ನಗರದ ಯುಬಿ ಸಿಟಿಯ ಶಿರೋ ಬಾರ್. ವಿಠಲ್ ಮಲ್ಯ ರಸ್ತೆಯ ಬಿಯರಿ ಕ್ಲಬ್ ಮೇಲೆ ದಾಳಿ ನಡೆಸಿದ ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕ ಸ್ಥಳದಲ್ಲಿ ಧೂಮಾಪಾನ ಸೇವನೆಗೆ ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ಮಾಲೀಕರಿಗೆ ದಂಡ ವಿಧಿಸಿ, ತಾತ್ಕಾಲಿಕವಾಗಿ ಪರವಾನಗಿ ರದ್ದು ಮಾಡಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದ ಯುಬಿ ಸಿಟಿಯ ಶಿರೋ ಬಾರ್. ವಿಠಲ್ ಮಲ್ಯ ರಸ್ತೆಯ ಬಿಯರಿ ಕ್ಲಬ್ ಮೇಲೆ ದಾಳಿ ನಡೆಸಿದ ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕ ಸ್ಥಳದಲ್ಲಿ ಧೂಮಾಪಾನ ಸೇವನೆಗೆ ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ಮಾಲೀಕರಿಗೆ ದಂಡ ವಿಧಿಸಿ, ತಾತ್ಕಾಲಿಕವಾಗಿ ಪರವಾನಗಿ ರದ್ದು ಮಾಡಿದ್ದಾರೆ. 

ಬಿಬಿಎಂಪಿಯ ತಂಬಾಕು ನಿಯಂತ್ರಣ ಘಟಕದ ಆರೋಗ್ಯಾಧಿಕಾರಿ ಡಾ.ಸವಿತಾ ನೇತೃತ್ವದಲ್ಲಿ ಭಾನುವಾರ ಯುಬಿ ಸಿಟಿಯ ಶಿರೋಬಾರ್, ವಿಠಲ್ ಮಲ್ಯ ರಸ್ತೆಯ ಬಿಯರ್ ಕ್ಲಬ್, ಸ್ಕೈಬಾರ್, ಫರ್ಜಿ ಕೆಫೆ ಸೇರಿ ಒಟ್ಟು 4 ಕಡೆ ದಾಳಿ ನಡೆಸಿದರು. ಈ ವೇಳೆ ತಂಬಾಕು ಕಾಯ್ದೆ 2003ರ ಅನ್ವಯ ಯಾವುದೇ ನಿಯಮ ಪಾಲನೆ ಮಾಡದೇ ಶಿರೋ ಬಾರ್ ನಲ್ಲಿ ಸಾರ್ವಜನಿಕವಾಗಿ ಧೂಮಪಾನ ಸೇವನೆಗೆ ಅವಕಾಶ ಮಾಡಿಕೊಡಲಾಗಿತ್ತು. 

ಈ ಹಿನ್ನಲೆಯಲ್ಲಿ ಶಿರೋಬಾರ್ ಮಾಲೀಕರಿಗೆ ರೂ.15 ಸಾವಿರ, ಬಿಯರಿ ಕ್ಲಬ್ ಮಾಲೀಕರಿಗೆ ರೂ.64 ಸಾವಿರ ದಂಡ ವಿಧಿಸಿ, ನೋಟಿಸ್ ಜಾರಿ ಮಾಡಿ ತಾತ್ಕಾಲಿಕವಾಗಿ ಪರವಾನಗಿ ರದ್ದುಪಡಿಸಲಾಯಿತು. 

ಇನ್ನು ಸ್ಕೈಬಾರ್ ಮತ್ತು ಫರ್ಜಿ ಕೆಫೆಯ ಮಾಲೀಕರಿಗೆ ಮತ್ತು ಅಧಿಕಾರಿ ಸಿಬ್ಬಂದಿಗೆ ಕೆಲ ನ್ಯೂನ್ಯತೆ ಸರಿಪಡಿಸಿಕೊಳ್ಳುವಂತೆ ಎಚ್ಚರಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com