ಸೆಟ್ ದೋಸೆ, ಮಸಾಲೆ ದೋಸೆ ಓಕೆ.. ಆದರೆ ಈರುಳ್ಳಿ ದೋಸೆ ಮಾತ್ರ ಕೇಳಬೇಡಿ..!

ದಿನಗಳೆದಂತೆ ಅಗತ್ಯ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಟೊಮೆಟೋ ಬೆನ್ನಲ್ಲೇ ಇದೀಗ ಈರುಳ್ಳಿ ಕೂಡ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗಗನಕ್ಕೇರಿದ ಈರುಳ್ಳಿ ಬೆಲೆ, ಕತ್ತರಿಸಿದಾಗ ಮಾತ್ರವಲ್ಲ, ಖರೀದಿ ಮಾಡುವಾಗಲೂ ಕಣ್ಣಲ್ಲಿ ನೀರು ಗ್ಯಾರಂಟಿ!

ಬೆಂಗಳೂರು: ದಿನಗಳೆದಂತೆ ಅಗತ್ಯ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಟೊಮೆಟೋ ಬೆನ್ನಲ್ಲೇ ಇದೀಗ ಈರುಳ್ಳಿ ಕೂಡ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ.

ಹೌದು.. ಸಿಲಿಕಾನ್ ಸಿಟಿಯಲ್ಲಿ ಈರುಳ್ಳಿ ದರ 100 ಗಡಿ ಕೂಡ ದಾಟಿದ್ದು, ಪ್ರತೀ ಕೆಜಿಗೆ 110 ರಿಂದ 120 ರೂಗಳಿಗೆ ಏರಿಕೆಯಾಗಿದೆ. ಇದೇ ಕಾರಣಕ್ಕೆ ಪ್ರಮುಖ ಹೊಟೆಲ್ ಗಳಲ್ಲಿ ಈರುಳ್ಳಿಗೆ ಖಾದ್ಯಗಳಿಗೆ ಅಲ್ಪ ವಿರಾಮ ಹಾಕಲಾಗಿದೆ. 

ಬೆಂಗಳೂರಿನ ಯಶವಂತಪುರ ಎಪಿಎಂಸಿ ಯಾರ್ಡ್ ನಲ್ಲಿಯೇ ಪ್ರತೀ ಕೆಜಿ ಈರುಳ್ಳಿ 90 ರೂ ಬಿಕರಿ ಮಾಡಲಾಗುತ್ತಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ 110 ರಿಂದ 120 ರೂಗೆ ಮಾರಾಟ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಬೆಂಗಳೂರಿನ ಬಹುತೇಕ ಹೊಟೆಲ್ ಗಳಲ್ಲಿ ಈರುಳ್ಳಿ ಹೆಚ್ಚಾಗಿ ಬಳಕೆ ಮಾಡುವ ಖಾದ್ಯಗಳ ತಯಾರಿಯನ್ನು ಮರು ಪರಿಶೀಲಿಸಲಾಗುತ್ತಿದೆ. 

ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಶತಕದಾಟಿದ್ದು, ಜಯನಗರ, ಜೆಪಿ ನಗರ, ಕಮರ್ಷಿಯಲ್ ಸ್ಟ್ರೀಟ್, ಎಂಜಿ ರಸ್ತೆ, ಹಲಸೂರಿನಲ್ಲಿ ಈರುಳ್ಳಿ ದರ 120 ರೂಗಳಾಗಿದ್ದು, ವಿಜಯನಗರ, ರಾಜಾಜಿನಗರ, ರಾಜರಾಜೇಶ್ವರಿನಗರ ಇತರೆ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ 100 ರೂ. ದಾಟಿದೆ. 

ಇನ್ನು ದೇಶದ ಪ್ರಮುಖ ನಗರಗಳಲ್ಲಿಯೂ ಈರುಳ್ಳಿ ಬೆಲೆ ಗಗನ ಮುಟ್ಟಿದ್ದು, ಗುರುವಾರ ಪ್ರತೀ ಕೆಜಿ ಈರುಳ್ಳಿ ದರ ಸರಾಸರಿ 70ರೂಗೆ ಏರಿಕೆಯಾಗಿದೆ. ಇನ್ನು ಗೋವಾ ರಾಜಧಾನಿ ಪಣಜಿಯಲ್ಲಿ ದರ ಶತಕ ಭಾರಿಸಿದ್ದು, ಪ್ರತೀ ಕೆಜಿ ಈರುಳ್ಳಿ ದರ 100 ರೂ ದಾಟಿದೆ. ಪ್ರಸ್ತುತ ಪಣಜಿಯಲ್ಲಿ ಪ್ರತೀ ಕೆಜಿ ಈರುಳ್ಳಿಗೆ 110ರು ಇದ್ದು,  ಇದು ದೇಶದಲ್ಲೇ ಅತ್ಯಧಿಕ ಎಂದು ಹೇಳಲಾಗಿದೆ.

ಇದೇ ವಿಚಾರವಾಗಿ ಮಾಹಿತಿ ನೀಡಿರುವ ಗ್ರಾಹಕ ಸಚಿವಾಲಯ, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಈರುಳ್ಳಿ ದರ ಅತೀ ಕಡಿಮೆ, ಅಂದರೆ ಕೇಜಿಗೆ 38 ರುಪಾಯಿ ಇದ್ದು, ದೆಹಲಿಯಲ್ಲಿ 76ರೂ. ಮುಂಬೈನಲ್ಲಿ 92ರು., ಕೋಲ್ಕತಾದಲ್ಲಿ 100ರು., ಚೆನ್ನೈನಲ್ಲಿ 80ರು. ಗಳಷ್ಟಿದೆ. 

ಉಳಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಈರುಳ್ಳಿ ದರ ಈ ಕೆಳಕಂಡಂತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com