ಅರಣ್ಯ ಪ್ರದೇಶದಲ್ಲಿ ದುರ್ವರ್ತನೆ: ಬೆಂಗಳೂರು ಪ್ರವಾಸಿಗರಿಗೆ ದಂಡ

ಮುಳ್ಳಯ್ಯನ ಗಿರಿ ಬೆಟ್ಟದ ಬಳಿಯಿರುವ ಅರಣ್ಯಕ್ಕೆ ಬಿಯರ್ ಬಾಯಲ್ ಹಿಡಿದು ದುರ್ವತನೆ ಪ್ರದರ್ಶಿಸಿದ ಬೆಂಗಳೂರು ಮೂಲಕ ಎರಡು ಪ್ರವಾಸಿ ತಂಡಕ್ಕೆ ಅರಣ್ಯ ಇಲಾಖೆ ದಂಡ ವಿಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶಿವಮೊಗ್ಗ: ಮುಳ್ಳಯ್ಯನ ಗಿರಿ ಬೆಟ್ಟದ ಬಳಿಯಿರುವ ಅರಣ್ಯಕ್ಕೆ ಬಿಯರ್ ಬಾಯಲ್ ಹಿಡಿದು ದುರ್ವತನೆ ಪ್ರದರ್ಶಿಸಿದ ಬೆಂಗಳೂರು ಮೂಲಕ ಎರಡು ಪ್ರವಾಸಿ ತಂಡಕ್ಕೆ ಅರಣ್ಯ ಇಲಾಖೆ ದಂಡ ವಿಧಿಸಿದೆ. 

ಕಾರಿನಲ್ಲಿ ಅರಣ್ಯ ಪ್ರದೇಶಕ್ಕೆ ತೆರಳಿದ್ದ ಯುವಕರ ತಂಡ ಬಿಯರ್ ಬಾಟಲಿಗಳನ್ನು ಹಿಡಿದಿದ್ದು, ದುರ್ನಡತೆ ಪ್ರದರ್ಶಿಸುತ್ತಿದ್ದಾರೆಂದು ಸ್ಥಳೀಯರು ಅರಣ್ಯ ಸಿಬ್ಬಂದಿಗೆ ಮಾರಿತಿ ನೀಡಿದ್ದರು. ಇದೇ ರೀತಿ ಮತ್ತೊಂದು ತಂಡ ಕೂಡ ದುರ್ನಡತೆ ಪ್ರದರ್ಶಿಸಿದೆ. ಹೀಗಾಗಿ ಅರಣ್ಯ ಇಲಾಖೆ ಪ್ರವಾಸಿ ತಂಡಕ್ಕೆ ರೂ.8,000 ದಂಡ ವಿಧಿಸಿದೆ ಎಂದು ವರದಿಗಳು ತಿಳಿಸಿವೆ. 

ಚಿಕ್ಕಮಗಳೂರು ಅರಣ್ಯಾಧಿಕಾರಿ ಶಿಲ್ಪಾ ಮಾತನಾಡಿ, ಪ್ರಕರಣ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆದರೂ, ಜಿಲ್ಲೆಯಲ್ಲಿ ಪದೇ ಪದೇ ಈ ರೀತಿಯ ಘಟನೆಗಳು ಮರುಕಳುಹಿಸುತ್ತಿದೆ ಎಂದಿದ್ದಾರೆ. 

ಕೈಮಾರಾ ಚೆಕ್ ಪೋಸ್ಟ್ ಬಳಿಯೂ ಇದೇ ವಾರ ಇಂತಹದ್ದೇ ಘಟನೆ ನಡೆದಿತ್ತು. ಆದರೆ, ದುರ್ವರ್ತನೆ ತೋರಿದ ಯುವಕರಿಗೆ ಸ್ಥಳದಲ್ಲಿಯೇ ಶಿಕ್ಷೆ ನೀಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com