ಸ್ವಚ್ಛ ಹಾಗೂ ಪ್ಲಾಸ್ಟಿಕ್ ಮುಕ್ತ ಬೆಂಗಳೂರು ನಗರವಾಗಿಸುವುದು ನನ್ನ ಗುರಿಯಾಗಿತ್ತು: ಬಿಬಿಎಂಪಿ ಮೇಯರ್

ಸ್ವಚ್ಛ ಹಾಗೂ ಪ್ಲಾಸ್ಟಿಕ್ ಮುಕ್ತ ಬೆಂಗಳೂರು ನಗರವಾಗಿಸುವುದು ನನ್ನ ಗುರಿಯಾಗಿದ್ದು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಶುಕ್ರವಾರ ಹೇಳಿದ್ದಾರೆ. 
ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ
ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ

ಬೆಂಗಳೂರು: ಸ್ವಚ್ಛ ಹಾಗೂ ಪ್ಲಾಸ್ಟಿಕ್ ಮುಕ್ತ ಬೆಂಗಳೂರು ನಗರವಾಗಿಸುವುದು ನನ್ನ ಗುರಿಯಾಗಿದ್ದು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಶುಕ್ರವಾರ ಹೇಳಿದ್ದಾರೆ. 

ಬಿಬಿಎಂಪಿ ಮೇಯರ್ ಆಗಿ ಕಡೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಬೆಂಗಳೂರು ಅಭಿವೃದ್ಧಿಗಾಗಿ 1 ವರ್ಷದ ಅಧಿಕಾರದಲ್ಲಿ ಸಾಕಷ್ಟು ಕಠಿಣ ಶ್ರಮ ಪಟ್ಟಿದ್ದೇನೆ. ಸ್ವಚ್ಛತೆ ಕಾಪಾಡುವಲ್ಲಿ, ಪರಿಸರ ರಕ್ಷಣೆ ಮಾಡುವಲ್ಲಿ, ಆರ್ಥಿಕ ಸ್ಥಿತಿಗತಿ ಕಾಪಾಡುವಲ್ಲಿ ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆಂದು ಹೇಳಿದ್ದಾರೆ. 

ಘನತ್ಯಾಜ್ಯ ನಿರ್ವಹಣೆ, ಕಸ ವಿಲೇವಾರಿ ಮತ್ತು ಪ್ಲಾಸ್ಟಿಕ್ ನಿಷೇಧಕ್ಕೆ ನೀಡಿದ ಕೊಡುಗೆಯನ್ನು ಇದೇ ವೇಳೆ ಮೇಯರ್ ಒತ್ತಿ ಹೇಳಿದ್ದಾರೆ. 

ಇದೇ ವೇಳೆ ಜನತೆ ಜೊತೆ ವರ್ಷ ನಾಗರೀಕ ಸ್ಪಂದನೆಯ ಹಾದಿಯಲಿ ಎಂಬ ಪುಸ್ತಕವನ್ನೂ ಮೇಯರ್ ಬಿಡುಗಡೆ ಮಾಡಿದ್ದಾರೆ. 

ಸ್ವಚ್ಛದೆ ಹಾಗೂ ಪ್ಲಾಸ್ಟಿಕ್ ನಿಷೇಧ ಮಾಡುವುದು ನನ್ನ ಗುರಿಯಾಗಿತ್ತು. ಹೋಟೆಲ್, ಶಾಪ್ ಗಳು ಹಾಗೂ ವಾಣಿಜ್ಯ ಕಟ್ಟಡಗಳು, ಮಾಲ್ ಗಳು, ಮಾರುಕಟ್ಟೆ, ಕನ್ವೆನ್ಷನ್ ಹಾಕ್ ಗಳು ಹಾಗೂ ಇತರೆ ಪ್ರದೇಶಗಳ್ಲಿ ಪ್ಲಾಸ್ಟಿಕ್ ಬಳಕೆಗಳನ್ನು ನಿಷೇಧ ಮಾಡಲಾಗಿತ್ತು. ಇದರಿಂದ ಸಾಕಷ್ಟು ಉಪಯೋಗಗಳಾಗಿವೆ. ಕೆಲವೆಡೆ ಪ್ಲಾಸ್ಟಿಕ್ ಬಳಕೆಯನ್ನೇ ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ. 

ಪಿಒಪಿ ಗಣೇಶ ಮೂರ್ತಿಗಳ ವಿರುದ್ಧ ಅಭಿಯಾನವನ್ನೇ ನಡೆಸಲಾಗಿತ್ತು. ಇದರ ಪರಿಣಾಮ ಈ ಬಾರಿ ಮಣ್ಣಿನ ಗಣೇಶ ಮೂರ್ತಿಗಳ ಬಳಕೆ ಹೆಚ್ಚಾಗಿ ಕೇವಲ ಶೇ.2 ರಷ್ಟು ಮಾತ್ರ ಪಿಒಪಿ ಗಣೇಶ ಮೂರ್ತಿಗಳ ಬಳಕೆ ಕಂಡು ಬಂದಿತ್ತು. ಮುಂದಿನ ಮೇಯರ್ ಕೂಡ ಇದೇ ರೀತಿಯ ಕೆಲಸಗಳನ್ನು ಮಾಡುತ್ತಾರೆಂದು ಆಶಿಸುತ್ತೇನೆ. ಮುಂಬರುವ ತಿಂಗಳುಗಳಲ್ಲಿ ಬೆಂಗಳೂರು ಪ್ಲಾಸ್ಟಿಕ್ ಮುಕ್ತ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಮುಕ್ತ ನಗರವಾಗಲಿ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com