ರಾಜ್ಯ
ತುಮಕೂರು: ಗೋಕಟ್ಟೆಗೆ ಬಿದ್ದು ತಾಯಿ ಮಕ್ಕಳು ಸಾವು
ಇಬ್ಬರು ಮಕ್ಕಳೊಂದಿಗೆ ಗೋಕಟ್ಟೆಗೆ ಬಿದ್ದು ತಾಯಿಯೂ ಮೃತಪಟ್ಟಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ನಲ್ಲೂರು ಹಟ್ಟಿ ಬಳಿ ನಡೆದಿದೆ.
ತುಮಕೂರು: ಇಬ್ಬರು ಮಕ್ಕಳೊಂದಿಗೆ ಗೋಕಟ್ಟೆಗೆ ಬಿದ್ದು ತಾಯಿಯೂ ಮೃತಪಟ್ಟಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ನಲ್ಲೂರು ಹಟ್ಟಿ ಬಳಿ ನಡೆದಿದೆ.
ತಾಯಿ ರತ್ನಮ್ಮ ( 37), ಮಕ್ಕಳಾದ ಚಂದ್ರಿಕಾ (15), ಚೇತನ್ (13) ಮೃತ ದುರ್ದೈವಿಗಳು. ದನದ ಮೈ ತೊಳೆಯಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.