ಕೊರೋನಾ ಸೋಂಕಿನಿಂದ ವೃದ್ಧ ಸಾವು: ಬೆಂಗಳೂರಿನಲ್ಲಿ 80 ಮಂದಿಗೆ ಕ್ವಾರಂಟೈನ್

ನಗರದಲ್ಲಿ 65 ವರ್ಷದ ವ್ಯಕ್ತಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಆತನ ಜೊತೆ ಸಂಪರ್ಕವಿದ್ದ 80 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಏಪ್ರಿಲ್ 12 ರಂದು  ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ  ಅದೇ ದಿನ ಸಂಜೆ ಸಾವನ್ನಪ್ಪಿದ್ದ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ 65 ವರ್ಷದ ವ್ಯಕ್ತಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಆತನ ಜೊತೆ ಸಂಪರ್ಕವಿದ್ದ 80 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಏಪ್ರಿಲ್ 12 ರಂದು  ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ  ಅದೇ ದಿನ ಸಂಜೆ ಸಾವನ್ನಪ್ಪಿದ್ದ. ರೋಗಿಯ ಗಂಟಲಿನ ದ್ರವ ಮಾದರಿಯನ್ನು ಭಾನುವಾರ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಮವಾರ ವರದಿ ಬಂದಿತ್ತು ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

ಮೃತ ವೃದ್ಧನ ಕುಟುಂಬಸ್ಥರು ಸೇರಿದಂತೆ ಟಿಪು ನಗರದಲ್ಲಿ ಆತನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ 80 ಮಂದಿಯನ್ನು ಸಿವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿಡಲಾಗಿದೆ ಎಂದು ಕೆ ಆರ್ ಮಾರ್ಕೆಟ್ ಕಾರ್ಪೋರೇಟರ್ ನಜಿಮಾ ಖಾನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com