ಕೊರೋನಾದಿಂದ ಕಾರು ಚಾಲಕ ಸಾವು: ರಾಜ್ಯದಲ್ಲಿ 25ಕ್ಕೇರಿದ ಸೋಂಕಿತ ಸಂಖ್ಯೆ

ಕಳೆದ ನಾಲ್ಕೈದು ದಿನಗಳಿಂದ ಹೆಚ್ಚುತ್ತಲೇ ಸಾಗಿದ್ದ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಶನಿವಾರದ ಮಟ್ಟಿಗೆ ಕೊಂಚ ಇಳಿಮುಖವಾಗಿದ್ದು, ಹೊಸದಾಗಿ 25 ಮಂದಿಯಲ್ಲಿ ಮಾತ್ರ ವೈರಸ್ ಪತ್ತೆಯಾಗಿದೆ. ಈ ನಡುವೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದ್ದ ಕಾರು ಚಾಲಕನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ಹೆಚ್ಚುತ್ತಲೇ ಸಾಗಿದ್ದ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಶನಿವಾರದ ಮಟ್ಟಿಗೆ ಕೊಂಚ ಇಳಿಮುಖವಾಗಿದ್ದು, ಹೊಸದಾಗಿ 25 ಮಂದಿಯಲ್ಲಿ ಮಾತ್ರ ವೈರಸ್ ಪತ್ತೆಯಾಗಿದೆ. ಈ ನಡುವೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದ್ದ ಕಾರು ಚಾಲಕನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. 

ರಾಜ್ಯದಲ್ಲಿ ನಿನ್ನೆ 25 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದರಂತೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 384ಕ್ಕೆ ಏರಿಕೆಯಾಗಿದೆ. 

ಏ.16ರಂದು ಹೃದಯಾಘಾತದಿಂದ ಮೃತಪಟ್ಟಿದ್ದ 42 ವರ್ಷದ ವಿಜಯಪುರ ಜಿಲ್ಲೆಯ ವ್ಯಕ್ತಿಗೆ ಕೊರೋನಾ ಸೋಂಕಿತ್ತು ಎಂಬುದು ಇದೀಗ ದೃಢಪಟ್ಟಿದೆ. ಇಬ್ಬರು ಸೋಂಕಿತರ ಸಂಪರ್ಕದಿಂದ ಮೃತ ವ್ಯಕ್ತಿಗೆ ಸೋಂಕು ತಗುಲಿದೆ. ಇದರಿಂದ ಒಟ್ಟು ಮೃತ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಅಲ್ಲದೆ. ಈ ಮೃತ ವ್ಯಕ್ತಿಯೇ ಸೋಂಕಿತರಲ್ಲಿ ಅತಿ ಕಿರಿಯ ವಯಸ್ಸಿನವರಾಗಿದ್ದಾರೆ. ಗದಗದಲ್ಲಿ ಮಾ.8 ರಂದು ಮೃತಪಟ್ಟಿದ್ದ ಕೊರೋನಾ ಸೋಂಕಿತ ವೃದ್ಧೆ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣಗ ವರದಿಯಾಗಿರುವುದು ಆತಂಕ ಸೃಷ್ಟಿಸಿದೆ. 

ಮೃತಪಟ್ಟ ಚಾಲಕ ಕೆಲ ದಿನಗಳ ಹಿಂದಷ್ಟೇ ಇಬ್ಬರು ವ್ಯಕ್ತಿಗಳನ್ನು ವಿಜಯಪುರದಿಂದ ಬೆಂಗಳೂರಿಗೆ ಕರೆತಂದಿದ್ದ. ಬಳಿಕ ತಾನು ಕರೆತಂದಿದ್ದ ಇಬ್ಬರು ವ್ಯಕ್ತಿಗಳಲ್ಲಿ ವೈರಸ್ ಇತ್ತು ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಬೆಂಗಳೂರಿಗೆ ಕರೆತಂದ ಬಳಿಕ ಮತ್ತೆ ವಿಜಯಪುರಕ್ಕೆ ಈ ಇಬ್ಬರ ಜೊತೆಗೆ ಪ್ರಯಾಣ ಮಾಡಿದ್ದ. ಬಳಿಕ ಏಪ್ರಿಲ್ 16 ರಂದು ವಿಚಾರ ವಿಚಾರ ತಿಳಿದ ಬಳಿಗ ಆಘಾತಕ್ಕೊಳಗಾಗಿದ್ದ ಎಂದು ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ. 

ವೈರಸ್ ನಿಂದ ಯುವ ವ್ಯಕ್ತಿ ಸಾವನ್ನಪ್ಪಿರುವುದು ದುರಾದೃಷ್ಟಕರ ವಿಚಾರ. ತನಗೂ ವೈರಸ್ ಬಂದಿರಬಹುದು ಎಂದು ಹೆದರಿ ಆತನಿಗೆ ಹೃದಯಾಘಾತವಾಗಿರಬಹುದು. ವೈರಸ್ ನಿಂದ ಗುಣಮುಖರಾಗಬಹುದು ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಈಗಾಗಲೇ ವೈರಸ್ ನಿಂದ ಗುಣಮುಖರಾಗಿರುವವರು ಸಾಕಷ್ಟು ಜನರಿದ್ದಾರೆ. ಜನರು ಆತಂಕಕ್ಕೊಳಗಾಗಬಾರದು. ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಸಾವಿನ ಸಂಖ್ಯೆ ಕಡಿಮೆಯಿದೆ. ವೈದ್ಯರ ಸಲಹೆ ಮಾಡುವಂತೆ ಸಲಹೆ ನೀಡುತ್ತಿದ್ದೇವೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com