

ಬೆಂಗಳೂರು: ಕೋವಿಡ್ 19 ಕಾಯಿಲೆಗೆ ಸೋಮವಾರ ಬೆಳಿಗ್ಗೆ 80 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಇದರಿಂದ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದಂತಾಗಿದೆ. ಒಟ್ಟು ರಾಜ್ಯದಲ್ಲಿ ಕೊರೋನಾದಿಂದ 17 ಮಂದಿ ಸಾವನ್ನಪ್ಪಿದ್ದಾರೆ
ಮೂರು ವರ್ಷಗಳಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧನಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ರಾತ್ರಿ ಅವರ ವರದಿ ಬಂದಿದ್ದು, ಕೋವಿಡ್ 19 ಪಾಸಿಟಿವ್ ಇರುವುದು ಗೊತ್ತಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಮಾರ್ಚ್ 9ರಂದು ನಗರದ ಕೆ ಎನ್ ಝಡ್ ಫಂಕ್ಷನ್ ಹಾಲ್ ಬಳಿಯ 76 ವರ್ಷದ ಮೊಹಮ್ಮದ್ ಹುಸೇನ್ ಸಿದ್ದಿಕಿ ಅವರು ಕೋವಿಡ್ ಗೆ ಬಲಿಯಾಗಿದ್ದರು. ಕಾಕತಾಳೀಯವೆಂದರೆ 80 ವರ್ಷದ ವೃದ್ಧನಂತೆ ಸಿದ್ದಿಕಿ ಅವರ ವೈದ್ಯಕೀಯ ವರದಿಯೂ ಅವರು ಸಾವಿಗೀಡಾದ ನಂತರವೇ ಬಂದಿತ್ತು. ಏಪ್ರಿಲ್ 7ರಂದು 65 ವರ್ಷದ ಹಣ್ಣಿನ ವ್ಯಾಪಾರಿ, ಏಪ್ರಿಲ್ 13 ರಂದು 55 ವರ್ಷದ ಬಟ್ಟೆ ವ್ಯಾಪಾರಿ ಈ ಸೋಂಕಿಗೆ ಬಲಿಯಾಗಿದ್ದಾರೆ.
ರಾಷ್ಟ್ರಪತಿ ಭವನಕ್ಕೆ ತಟ್ಟಿದ ಕೊರೋನಾ ಸೋಂಕು:ಸಿಬ್ಬಂದಿಯಲ್ಲಿ ಪತ್ತೆ, ಹೋಂ ಕ್ವಾರಂಟೈನ್ ನಲ್ಲಿ 125 ಕುಟುಂಬ
ಔಷಧಿ ಮತ್ತು ಅಗತ್ಯ ಸೇವೆಗಳಿಗಾಗಿ ಕೊಂಕಣ ರೈಲ್ವೆಯಿಂದ ವಿಶೇಷ ರೈಲು
ಕೊರೋನಾ ವೈರಸ್ ಲಾಕ್ ಡೌನ್: 3 ತಿಂಗಳು ಉಚಿತ ಗ್ಯಾಸ್ ಸಿಲಿಂಡರ್ ನೀಡಲು ರಾಜ್ಯ ಸರ್ಕಾರ ನಿರ್ಧಾರ
ವೈದ್ಯರ ಕಂಡರೆ ಹೊಡೆಯುವ ಮಂದಿಗಳ ನಡುವೆ ಜೀವ ಉಳಿಸಿದ ಆರೋಗ್ಯ ಕಾರ್ಯಕರ್ತರ ಕುರಿತು 'ಸಲೀಂ' ಹೇಳಿದ ಮಾತು ಕೇಳಿ!