

ಬೆಂಗಳೂರು: ಇಡೀ ಜಗತ್ತಿನಲ್ಲಿ ಇಂದು ಕೊರೋನಾವೈರಸ್ ಹಾವಳಿ ಭಯಂಕರವಾಗಿ ಹರಡುತ್ತಿದೆ. ಜಗತ್ತಿನ ನಾನಾ ದೇಶಗಳು ಮಹಾಮಾರಿಯ ವಿರುದ್ಧ ನಾನಾ ವಿಧದಲ್ಲಿ ಹೋರಾಟ ನಡೆಸಿದೆ. ಈ ನಡುವೆ ಬೃಹತ್ ಬೆಂಗಳುರು ಮಹಾನಗರ ಪಾಲಿಕೆ ಸೋಮವಾರ ತನ್ನ ೨೦೨೦-೨೧ನೇ ಸಾಲಿನ ಬಜೆಟ್ ಮಂಡಿಸಿದೆ. , ಪ್ರಸ್ತುತ ಬೆಂಗಳೂರಿನಲ್ಲಿ 40 ಸಕ್ರಿಯ ಕೋವಿಡ್ -19 ಪ್ರಕರಣಗಳಿವೆ. ಆದರೆ ಪರಿಸ್ಥಿತಿಯನ್ನು ನಿಭಾಯಿಸಲು ಬಿಬಿಎಂಪಿ ಯಿಂದ ಯಾವುದೇ ನಿಧಿಯನ್ನು ಕಾಯ್ದಿರಿಸಲಾಗಿಲ್ಲ ಬದಲಿಗೆ ಅದರ ತೆರಿಗೆ ಮತ್ತು ಹಣಕಾಸು ಸಮಿತಿಯು 198 ವಾರ್ಡ್‌ಗಳಿಂದ ತಲಾ 25 ಲಕ್ಷ ರೂ. - ಒಟ್ಟು 49.50 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಿದೆ.
"ಕರೋನಾ ಬಿಕ್ಕಟ್ಟಿನ ಸಮಯದಲ್ಲಿ ಬಜೆಟ್ ಸಭೆ ನಡೆಸುವ ಅರ್ಥವೇನು, ಜನರ ಅಗತ್ಯಗಳನ್ನು ಪೂರೈಸಲು ಮತ್ತು ರೋಗದ ವಿರುದ್ಧ ಹೋರಾಡಲು ಯಾವುದೇ ಹಣವನ್ನು ವಿನಿಯೋಗಿಸಲಾಗಿಲ್ಲ. ಈ ಸಮಯದಲ್ಲಿ, ಅಭಿವೃದ್ಧಿ ಯೋಜನೆಗಳಿಗೆ ಕಡಿಮೆ ಹಣವನ್ನು ಹಂಚಿದ್ದರೂ ಒಪ್ಪಬಹುದಿತ್ತುಉದ್ಯಾನವನಗಳಲ್ಲಿ ಮಳೆನೀರು ಕೊಯ್ಲು ಮಾಡಲು 2 ಕೋಟಿ ರೂ. ಮತ್ತು ಫೆನ್ಸಿಂಗ್ ಪಾರ್ಕ್‌ಗಳಿಗೆ 15 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ. ಇದರ ಲಾಭವೇನು? ಪ್ರಸ್ತುತ, ಜನರು ನಾಗರಿಕ ಸೌಕರ್ಯದ ಕುರಿತು ಆಶಿಸುತ್ತಿಲ್ಲ. ಆದರೆ ಆಹಾರ.ಕ್ಕಾಗಿ ಬೇಡುತ್ತಿದ್ದಾರೆ. 2 ಕೋಟಿ ರೂ.ಗಳ ವರ್ಕ್ಸ್ ಫಂಡ್ ಅನ್ನು ಕಡಿತ ಮಾಡಲಾಗಿದೆ. ಅದರಿಂದ 25 ಲಕ್ಷ ರೂ.ಗಳನ್ನು ಈಗಾಗಲೇ 20,000 ಕೋಟಿ ರೂ.ಗಳನ್ನು ಹೊಂದಿರುವ ಸಿಎಂ ರಿಲೀಫ್ ಫಂಡ್ ಗೆ ನಿಡಲಾಗುತ್ತಿದೆ" ಬಿಬಿಎಂಪಿ ಕೌನ್ಸಿಲ್ ನ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಹೇಳಿದ್ದಾರೆ.
ನಾಮಪ್ರಭು ಕೆಂಪೇಗೌಡ ಹೆಸರಿನಲ್ಲಿ ಸ್ವಾಗತ ಕಮಾನುಗಳು ಮತ್ತು ನಗರದ ಎಂಟು ಪ್ರವೇಶದ್ವಾರಗಳಲ್ಲಿ ಲ್ಯಾಂಡ್ ಸ್ಕೇಪ್ ಗಾಗಿ 10 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ - ತುಮಕೂರು ರಸ್ತೆ, ಮೈಸೂರು ರಸ್ತೆ, ಹೊಸೂರು ರಸ್ತೆ, ಕೋಲಾರ ರಸ್ತೆ, ಕನಕಪುರ ರಸ್ತೆ, ದೇವನಹಳ್ಳಿ , ದೊಡ್ಡಬಲ್ಲಾಪುರ ರಸ್ತೆ ಮತ್ತು ಮಾಗಡಿ ರಸ್ತೆ.ಗಳಲ್ಲಿ ಇದು ಬರಲಿದೆ. ಯೋಜನೆ ಒಳ್ಳೆಯದೇ ಆದರೆ ಈ ಸಮಯದಲ್ಲಿ ಇದು ಅಗತ್ಯವಿರಲಿಲ್ಲ. ಮುಖ್ಯಮಂತ್ರಿ ಸ್ವತಃ ಹಣದ ಕೊರತೆ ಇದೆ ಎಂದು ಹೇಳಿರುವಾಗಲೂ ಇಂತಹಾ ಯೋಜನೆಗಳು ಘೋಷಣೆಯಾಗಬೇಕಾದ ಔಚಿತ್ಯವೇನು?“ಜನರಿಗೆ ತಿನ್ನಲು ಆಹಾರವಿಲ್ಲ, ಅನೇಕ ವಾರ್ಡ್‌ಗಳಿಗೆ ಹಾಲು ಸಿಕ್ಕಿಲ್ಲ. ರಸ್ತೆ ನಿರ್ವಹಣೆಗೆ ಹಣ ಹಂಚುವ ಬದಲು ಬಿಬಿಎಂಪಿ ಮೊದಲು ಜನರಿಗೆ ಹಾಲು ಮತ್ತು ಬಿಸ್ಕತ್ತು ನೀಡುವತ್ತ ಗಮನಹರಿಸಬೇಕು ”ಎಂದು ಬೆಂಗಳುರು ನಗರದ ನಾಗರಿಕರಾದ ರಮೇಶ್ ಆರ್ ಹೇಳಿದರು.
ಇದೇ ವೇಳೆ , “ಸಿಎಂ ನಿಧಿಗೆ ಹೋಗುವ ಕಾರ್ಪೊರೇಟರ್‌ಗಳ ನಿಧಿಯಿಂದ ಬರುವ ಹಣವು ಸರಿಯಾದ ಚಾನಲ್ ಮೂಲಕ ಜನರಿಗೆ ಹಿಂತಿರುಗುತ್ತದೆ. ನಗರದ ಬೆಳವಣಿಗೆಗೆ ಯೋಜನೆಗಳು ಸಹ ಅಗತ್ಯ. ”ಎಂದು ಬಿಬಿಎಂಪಿ ತೆರಿಗೆ ಮತ್ತು ಹಣಕಾಸು ಸಮಿತಿಯ ಅಧ್ಯಕ್ಷ ಎಲ್. ಶ್ರೀನಿವಾಸ್ ಸಮರ್ಥನೆ ನೀಡಿದ್ದಾರೆ.