ಮಾಸ್ಕ್ ಹಾಕಿಕೊಳ್ಳಿ ಎಂದಿದ್ದಕ್ಕೆ ಕಾರ್ಯನಿರತ ಪೊಲೀಸ್ ಮೇಲೆ ಯೋಧನಿಂದ ಹಲ್ಲೆ.!

ಮಾಸ್ಕ್ ಹಾಕಿಕೊಳ್ಳಿ, ಅನವಶ್ಯಕವಾಗಿ ತಿರುಗಾಡಬೇಡಿ ಎಂದು ಬುದ್ದಿವಾದ ಹೇಳಿದ ಕರ್ತವ್ಯ ನಿರತ ಪೊಲೀಸನಿಗೆ ಯುವಕನೋರ್ವ ಹಲ್ಲೆ ಮಾಡಿದ‌‌ ಘಟನೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ‌ ನಡೆದಿದೆ.
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ
Updated on

ಚಿಕ್ಕೋಡಿ: ಮಾಸ್ಕ್ ಹಾಕಿಕೊಳ್ಳಿ, ಅನವಶ್ಯಕವಾಗಿ ತಿರುಗಾಡಬೇಡಿ ಎಂದು ಬುದ್ದಿವಾದ ಹೇಳಿದ ಕರ್ತವ್ಯ ನಿರತ ಪೊಲೀಸನಿಗೆ ಯುವಕನೋರ್ವ ಹಲ್ಲೆ ಮಾಡಿದ‌‌ ಘಟನೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ‌ ನಡೆದಿದೆ.

ಎಕ್ಸಂಬಾ ಪಟ್ಟಣದಲ್ಲಿ ಕರ್ತವ್ಯದಲ್ಲಿ ಇದ್ದ ಪೊಲೀಸರು  ಮಾಸ್ಕ್ ಇಲ್ಲದೆ ಹೊರಗೆ ತಿರುಗಾಡುತ್ತಿದ್ದ  ಸಚಿನ್ ಸಾವಂತ್ ಎಂಬಾತನಿಗೆ ಮಾಸ್ಕ್ ಹಾಕಿಕೊಳ್ಳಿ, ಅನಗತ್ಯವಾಗಿ ಹೊರಗೆ ತಿರುಗಾಡಬೇಡಿ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಪೊಲೀಸರು ಹಾಗೂ ಸಚಿನ್ ನಡುವೆ ಮಾತಿಗೆ ಮಾತು ಬೆಳೆದಿದೆ.

ಈ ವೇಳೆ ಮಾತುಕತೆ ಕೈಮೀರಿ ನನಗೆ ಬುದ್ಧಿವಾದ ಹೇಳುತ್ತೀರಾ ಎಂದು ಏಕಾಏಕಿ ಸಚಿನ್ ಪೊಲೀಸರ ಬಟ್ಟೆ ಹಿಡಿದು ಎಳೆದಾಡಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ.

ಇದರಿಂದ ಪೊಲೀಸರು ಕೂಡ ಲಾಠಿ ರುಚಿ ತೋರಿಸಿ ಯೋಧನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇನ್ನೂ ಸಚಿನ್ ಎಂಬಾತನು ಸಿಆರ್ ಪಿ ಎಫ್ ಯೋಧ ಎಂದು ತಿಳಿದು ಬಂದಿದೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com