ರಾಜ್ಯ

ಸಿಹಿ ಸುದ್ದಿ: ಕರ್ನಾಟಕದಲ್ಲಿ ಶೇ.40ರಷ್ಟು ಕೊರೋನಾ ಸೋಂಕಿತರು ಗುಣಮುಖ, 523ರಲ್ಲಿ 207 ಮಂದಿ ಚೇತರಿಕೆ

ಸಿಹಿ ಸುದ್ದಿ: ಕರ್ನಾಟಕದಲ್ಲಿ ಶೇ.40ರಷ್ಟು ಕೊರೋನಾ ಸೋಂಕಿತರು ಗುಣಮುಖ, 523ರಲ್ಲಿ 207 ಮಂದಿ ಚೇತರಿಕೆ
ಶ್ರೀರಾಮುಲು
Published On :

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ಸೋಂಕಿತರು ಅಷ್ಟೇ ವೇಗವಾಗಿ ಗುಣಮುಖರಾಗುತ್ತಿರುವ ಸಿಹಿ ಸುದ್ದಿ ಕೂಡ ಹೊರಬಿದ್ದಿದೆ. 

ಇಲ್ಲಿಯವರೆಗೆ ರಾಜ್ಯದಲ್ಲಿ ದೃಢಪಟ್ಟಿರುವ 523 ಸೋಂಕಿತರ ಪೈಕಿ 207 ಜನರು ಗುಣಮುಖರಾಗಿದ್ದಾರೆ. ಇದರಿಂದ ಶೇಕಡಾ 40ರಷ್ಟು ಜನರು ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಮಂಗಳವಾರ ಒಂದೇ ದಿನದಲ್ಲಿ 14 ಜನರು ಗುಣಮುಖರಾಗಿದ್ದಾರೆ.

ಈ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ 21 ಸಾವುಗಳನ್ನು ಹೊರತುಪಡಿಸಿದರೆ ಉಳಿದಿರುವ ಸಕ್ರಿಯ ಪ್ರಕರಣಗಳು 295 ಮಾತ್ರ. 

ರಾಜ್ಯದಲ್ಲಿ ಅತಿ ಹೆಚ್ಚು ಸೋಂಕಿನ ಪ್ರಕರಣಗಳನ್ನು ಹೊಂದಿರುವ ಬೆಂಗಳೂರು ನಗರವೊಂದರಲ್ಲೇ 58 ಜನರು ಗುಣಮುಖರಾಗಿದ್ದಾರೆ.

ಮೈಸೂರಿನಲ್ಲಿ 87 ಸೋಂಕಿತರ ಪೈಕಿ 48, ಬೆಳಗಾವಿ 52 ಸೋಂಕಿತರರ ಪೈಕಿ 6, ವಿಜಯಪುರದಲ್ಲಿ 6, ಕಲಬುರಗಿಯಲ್ಲಿ 7, ಬಾಗಲಕೋಟೆಯಲ್ಲಿ 6, ಚಿಕ್ಕಬಳ್ಳಾಪುರದಲ್ಲಿ 11, ದಕ್ಷಿಣ ಕನ್ನಡದಲ್ಲಿ 6, ಬೀದರ್ ನಲ್ಲಿ 8, ಮಂಡ್ಯದಲ್ಲಿ 4, ಬಳ್ಳಾರಿಯಲ್ಲಿ 5, ಬೆಂಗಳೂರು ಗ್ರಾಮಾಂತರದಲ್ಲಿ 6, ಉತ್ತರ ಕನ್ನಡದಲ್ಲಿ 10, ಧಾರವಾಡದಲ್ಲಿ 2, ಉಡುಪಿಯಲ್ಲಿ 3, ದಾವಣಗೆರೆಯಲ್ಲಿ 2, ತುಮಕೂರಿನಲ್ಲಿ 1, ಚಿತ್ರದುರ್ಗದಲ್ಲಿ 1, ಕೊಡಗಿನಲ್ಲಿ 1 ಹಾಗೂ 16 ಇತರೆ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.