ಏರುತ್ತಿದೆ ಗುಣಮುಖರಾಗುತ್ತಿರುವವರ ಸಂಖ್ಯೆ: ರಾಜ್ಯದಲ್ಲಿ 523 ಸೋಂಕಿತರ ಪೈಕಿ 207 ಮಂದಿ ಗುಣಮುಖ

ರಾಜ್ಯದಲ್ಲಿ ಸೋಂಕಿತರ ಏರಿಕೆಯಾಗುತ್ತಿರುವುದು ಒಂದೆಡೆ ಆತಂಕಕಾರಿ ಬೆಳವಣಿಗೆಯೇ ಆಗಿದ್ದರೂ, ಮತ್ತೊಂದೆಡೆ ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿರುವುದು ತುಸು ನೆಮ್ಮದಿಯನ್ನು ನೀಡುತ್ತಿದೆ. ರಾಜ್ಯದಲ್ಲಿ ಈ ವರೆಗೂ 523 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದರಲ್ಲಿ 207 ಮಂದಿ ಗುಣಮುಖರಾಗುತ್ತಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಏರಿಕೆಯಾಗುತ್ತಿರುವುದು ಒಂದೆಡೆ ಆತಂಕಕಾರಿ ಬೆಳವಣಿಗೆಯೇ ಆಗಿದ್ದರೂ, ಮತ್ತೊಂದೆಡೆ ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿರುವುದು ತುಸು ನೆಮ್ಮದಿಯನ್ನು ನೀಡುತ್ತಿದೆ. ರಾಜ್ಯದಲ್ಲಿ ಈ ವರೆಗೂ 523 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದರಲ್ಲಿ 207 ಮಂದಿ ಗುಣಮುಖರಾಗುತ್ತಿದ್ದಾರೆ. 

ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 11 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಇದರಲ್ಲಿ 6 ಪ್ರಕರಣಗಳು ಕಲಬುರಗಿಯಲ್ಲಿಯೇ ದಾಖಲಾಗಿವೆ. ಮೂರು ಪ್ರಕರಣಗಳು ಜಮಖಂಡಿ ಹಾಗೂ ಬಾಗಲಕೋಟೆಯಲ್ಲಿ ದಾಖಲಾಗಿದ್ದರೆ, ಒಂದು ಪ್ರಕರಣ ಬೆಂಗಳೂರು ನಗರದಲ್ಲಿ ಬೆಳಕಿಗೆ ಬಂದಿವೆ. 

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾತನಾಡಿ, ಹೊಂಗಸಂದ್ರ ಹಾಗೂ ಪಾದರಾಯನಪುರದಲ್ಲಿ ಸರ್ಕಾರ ಈಗಾಗಲೇ ರ್ಯಾಂಡಮ್ ಸ್ಯಾಂಪಲಿಂಗ್ ಟೆಸ್ಟ್ ಗಳನ್ನು ಆರಂಭಿಸಿದೆ. ಕಳೆದರಡು ದಿನಗಳಿಂದ ಹೊಂಗಸಂದ್ರದಲ್ಲಿ 145 ಸ್ಯಾಂಪಲ್ಸ್'ಗಳು ಹಾಗೂ 70 ಸ್ಯಾಂಪಲ್ಸ್ ಗಳು ಪಾದರಾಯನಪುರದಲ್ಲಿ ಸಂಗ್ರಹಿಸಲಾಗಿದೆ. ಎಲ್ಲಾ ವೈದ್ಯಕೀಯ ವರದಿ ಕೂಡ ನೆಗೆಟಿವ್ ಬಂದಿದೆ ಎಂದು ಹೇಳಿದ್ದಾರೆ. 

ಈಗಾಗಲೇ ರಾಜ್ಯದಲ್ಲಿ 120 ಕಂಟೈನ್ಮೆಂಟ್ ಝೋನ್ ಗಳೆಂದು ಗುರ್ತಿಸಲಾಗಿದ್ದು, 436 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕಂಟೈನ್ಮೆಂಟ್ ಝೋನ್ ನಲ್ಲಿ 4,07,811 ಮಂದಿ ವಾಸವಿದ್ದು, 72,611 ಮನೆಗಳಿವೆ, ಅಲ್ಲದೆ, 5,931 ಕಚೇರಿ ಹಾಗೂ ಅಂಗಡಿಗಳಿವೆ. ಬಫರ್ ಜೋನ್ ನಲ್ಲಿ 36,39,304 ಮಂದಿ ವಾಸವಿದ್ದು, ಈ ಪ್ರದೇಶದಲ್ಲಿರುವ 7,69,342 ಮನೆಗಳ ಮೇಲೆ ನಿಗಾವಹಿಸಲಾಗಿದೆ. ಅಲ್ಲದೆ, ಈ ಪ್ರದೇಶದಲ್ಲಿರುವ 65,385 ಅಂಗಡಿ ಹಾಗೂ ಕಚೇರಿಗಳ ಮೇಲೂ ನಿಗಾವಹಿಸಲಾಗಿದೆ ಎಂದು ತಿಳಿಸಿದ್ದಾರೆ. 

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, ಏಪ್ರಿಲ್ 9-10ರವರೆಗೆ 500-600 ಸ್ಯಾಂಪಲ್ಸ್ ಗಳನ್ನು ಪರೀಕ್ಷೆ ನಡೆಸಲಾಗಿದೆ. ಇದೀಗ ಇತರ ಸಂಖ್ಯೆಯನ್ನು 4,827ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ. 

ಮುಂದಿನ ದಿನಗಳಲ್ಲಿ ಪರೀಕ್ಷೆ ಮಾಡುವ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ. ಆರ್'ಟಿ ಹಾಗೂ ಪಿಸಿಆರ್ ಕಿಟ್ಸ್ ಗಳು ನಮ್ಮಲ್ಲಿ ಸಾಕಷ್ಟಿವೆ. ಮತ್ತಷ್ಟು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ವ್ಯಾಲಿಡಿಟಿ ಪರೀಕ್ಷೆಗಾಗಿ ರ್ಯಾಪಿಡ್ ಟೆಸ್ಟ್ ಕಿಟ್ಸ್ ಗಳನ್ನು ನಿಮ್ಹಾನ್ಸ್'ಗೆ ಕಳುಹಿಸಲಾಗಿದೆ. 200 ಕಿಟ್ಸ್ ಗಳು ಉತ್ತಮ ಫಲಿತಾಂಶಗಳನ್ನು ನೀಡಿಲ್ಲ. ಈ ಬಗ್ಗೆ ಐಸಿಎಂಆರ್'ಗೆ ಮಾಹಿತಿ ನೀಡಲಾಗಿದೆ. ಈ ಕಿಟ್ಸ್ ಗಳನ್ನು ಬಳಕೆ ಮಾಡಲು ಸಾಧ್ಯವಿಲ್ಲ. ಈ ನಡುವೆ ಮಾಡಲಾಗಿದ್ದ 2 ಲಕ್ಷ ಕಿಟ್ಸ್ ಗಳ ಆರ್ಡರ್'ನ್ನು ರದ್ದು ಮಾಡಲಾಗಿದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com