ಅನೈತಿಕ ಸಂಬಂಧ: ತಡರಾತ್ರಿ ಪತ್ನಿ ಕೊಂದು, ಅತ್ಯಾಚಾರ, ಕೊಲೆಯ ನಾಟಕವಾಡಿದ ಪತಿರಾಯ!

ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ತಡರಾತ್ರಿ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಲ್ಲದೆ, ಪೊಲೀಸರ ಹಾದಿ ತಪ್ಪಿಸಲು ಅತ್ಯಾಚಾರ, ಕೊಲೆ ನಾಟಕವಾಡಿರುವ ಘಟನೆ ಮಾರತ್ತಹಳ್ಳಿ ಸಮೀಪ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ತಡರಾತ್ರಿ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಲ್ಲದೆ, ಪೊಲೀಸರ ಹಾದಿ ತಪ್ಪಿಸಲು ಅತ್ಯಾಚಾರ, ಕೊಲೆ ನಾಟಕವಾಡಿರುವ ಘಟನೆ ಮಾರತ್ತಹಳ್ಳಿ ಸಮೀಪ ನಡೆದಿದೆ. 

ಸಂಧ್ಯಾ (26) ಕೊಲೆಯಾದ ದುರ್ದೈವಿ. ಘಟನೆ ಸಂಬಂಧ ಆರೋಪಿ ನಾಗೇಶ್ ನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 

ವಿಧವೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ನಾಗೇಶ್ ಆಕೆಯೊಂದಿಗೆ ಜೀವನ ನಡೆಸುವುದಾಗಿ ತಿಳಿಸಿದ್ದೇನೆ. ಇದಕ್ಕೆ ಪತ್ನಿ ಸಂಧ್ಯಾ ನಿರಾಕರಿಸಿದ್ದಾಳೆ. ಇದರಿಂದ ನಾಗೇಶ್ ತೀವ್ರವಾಗಿ ಕೆಂಡಾಮಂಡಲಗೊಂಡಿದ್ದ. ನಂತರ ಚಿತ್ತೂರಿನಲ್ಲಿರುವ ತಾಯಿ ಮನೆಗೆ ಹೋಗುತ್ತೇನೆಂದು ಹೋಗಿದ್ದಾರೆ. ಈ ವೇಳೆ ಮಾರ್ಗದ ಮಧ್ಯೆಯೇ ಬಸ್ಸಿನಿಂದ ಇಳಿದಿರುವ ನಾಗೇಶ್ ಸಂಜೆ ಮತ್ತೆ ನಗರಕ್ಕೆ ಬಂದಿದ್ದಾನೆ. ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಮನೆಗೆ ಬಂದಿರುವ ನಾಗೇಶ್ ನಿದ್ರೆಯಲ್ಲಿದ್ದ ಪತ್ನಿಯ ಕುತ್ತಿಗೆಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ. ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿದ್ದಾನೆ. ಬಳಿಕ ಇದೊಂದು ಅತ್ಯಾಚಾರ ಹಾಗೂ ಕೊಲೆಯೆಂದು ಬಿಂಬಿಸಲು ಪತ್ನಿ ತೊಟ್ಟಿದ್ದ ಬಟ್ಟೆಯನ್ನು ತೆಗೆದುಹಾಕಿ, ಮದ್ಯ ಬಾಟಲಿ, ಗಾಜಿನ ಲೋಟಗಳನ್ನು ಇಟ್ಟಿದ್ದಾನೆ. ಬಳಿಕ ಚಿತ್ತೂರಿಗೆ ತೆರಳಿದ್ದಾನೆ. 

ನಂತರ ತನಗೇನು ತಿಳಿಯದಂತೆ ಮಂಗಳವಾರ ಬೆಳಿಗ್ಗೆ ಮನೆಯ ಬಳಿ ಬಂದು ಪತ್ನಿಯನ್ನು ಯಾರೋ ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದಾರೆಂದು ನಾಟಕವಾಡಿದ್ದಾನೆ. ಬಳಿಕ ಪೊಲೀಸರು ಮೊಬೈಲ್ ಕರೆಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳ ಮಾಹಿತಿ ಆಧರಿಸಿ ಆರೋಪಿಯನ್ನು ಮಂಗಳವಾರ ಸಂಜೆ ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ. 

ತಾಯಿ ಶವದ ಪಕ್ಕದಲ್ಲೇ ರಾತ್ರಿ ಕಳೆದ ಮಕ್ಕಳು
ಕೃತ್ಯದ ಅರಿವಲ್ಲದ ಮೃತ ಮಹಿಳೆಯ ಇಬ್ಬರು ಮಕ್ಕಳು, ಮುಂಜಾನೆವರೆಗೆ ರಕ್ತದ ಮಡುವಿನಲ್ಲೇ ಬಿದ್ದಿದ್ದ ಮೃತದೇಹದ ಪಕ್ಕದಲ್ಲೇ ಇದ್ದರು. ಬೆಳಿಗ್ಗೆ ಎಚ್ಚರಗೊಂಡ ಮೂರು ವರ್ಷದ ಮಗು ತನ್ನ ಸೋದರ ಮಾವನಿಗೆ ಕರೆ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ. 

5 ವರ್ಷಗಳ ಹಿಂದೆ ಸಂಧ್ಯಾ ಹಾಗೂ ನಾಗೇಶ್ ವಿವಾಹವಾಗಿದ್ದು, ದಂಪತಿಗೆ ಮೂರು ಮತ್ತು ಒಂದೂವರೆ ವರ್ಷದ ಇಬ್ಬರು ಮಕ್ಕಳಿದ್ದಾರೆ. ಮದುವೆ ಬಳಿಕ ಸಪ್ತಗಿರಿ ಲೇಔಟ್ ನಲ್ಲಿ ನೆಲೆಸಿದ್ದ ದಂಪತಿ, ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com