ಜ್ಯುವೆಲ್ಲರ್ ಶಾಪ್ ದರೋಡೆ: ನೇಪಾಳಿ ಕುಖ್ಯಾತ ಗ್ಯಾಂಗ್ ಸಿಸಿಬಿ ಬಲೆಗೆ

 ನಗರದ ಜ್ಯೂವೆಲ್ಲರಿ ಶಾಪ್ ವೊಂದನ್ನು ದರೋಡೆ ಮಾಡಿದ್ದ ಆರು ಜನರ ನೇಪಾಳಿ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ನೇಪಾಳಿ ಗ್ಯಾಂಗ್
ಬಂಧಿತ ನೇಪಾಳಿ ಗ್ಯಾಂಗ್
Updated on

ಬೆಂಗಳೂರು: ನಗರದ ಜ್ಯೂವೆಲ್ಲರಿ ಶಾಪ್ ವೊಂದನ್ನು ದರೋಡೆ ಮಾಡಿದ್ದ ಆರು ಜನರ ನೇಪಾಳಿ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅಮರ್ ಸಿಂಗ್, ಗಣೇಶ ಬಹದ್ದೂರ್ ಶಾಹಿ, ಕೃಷ್ಣಾ ರಾಜ್, ಚರಣ್ ಸಿಂಗ್, ಸಲೀಂ ಪಾಷಾ, ಶಾಹಿದ್ ಬಂಧಿತ ಆರೋಪಿಗಳು.

ಬಂಧಿತರಿಂದ 360 ಗ್ರಾಂ ಚಿನ್ನ, 25 ಕೆ.ಜಿ. ಬೆಳ್ಳಿ, ಲ್ಯಾಪ್ ಟಾಪ್, ಕೃತ್ಯಕ್ಕೆ ಬಳಸಿದ್ದ ಗ್ಯಾಸ್ ಕಟ್ಟರ್ ಆಟೋ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಆಗಸ್ಟ್ ಐದನೇ ತಾರೀಕು ವೈಟ್ ಫೀಲ್ಡ್​ನ ಮಾತಾಜಿ ಜ್ಯುವೆಲ್ಲರ್  ಶಾಪ್​ನಲ್ಲಿ ದರೋಡೆ ಮಾಡಿದ್ದ ಈ ತಂಡ  50 ಕೆ.ಜಿ ತೂಕದ ಆಭರಣಗಳನ್ನ ಕಳವು ಮಾಡಿರುವುದು ಸಿಸಿಟಿವಿಯಲ್ಲಿ  ಸೆರೆಯಾಗಿತ್ತು.

ಇನ್ನು ಈ ತಂಡವು ಇದಾಗಲೇ ಮುಂಬೈ, ತೆಲಾಂಗಣ, ಗುಜರಾತ್​ ಕೊಲ್ಕತ್ತಾದಲ್ಲಿಸಹ ಕಳವು ಮಾಡಿದ್ದು ಅಲ್ಲೆಲ್ಲಾ ಪೋಲೀಸರ ಕಣ್ತಪ್ಪಿಸಿ ಪರಾರಿಯಾಗಿತ್ತು ನಿನ್ನೆ ಸಹ ತಂಡವು ನೇಪಾಳಕ್ಕೆ ತೆರಳಲು ಎಲ್ಲಾ ಸಿದ್ದತೆ ನಡೆಸಿತ್ತು. ಇನ್ನೊಂದೇ ಗಂಟೆ ತಡವಾಗಿದ್ದರೂ ಇಡೀ ದುಷ್ಕರ್ಮಿಗಳ ಗುಂಪು ಎಸ್ಕೇಪ್ ಆಗುತ್ತಿದ್ದಿತು ಎಂದು ಅಧಿಕಾರಿಗಳು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com