ರಾಜ್ಯದ 5 ವಿಮಾನ ನಿಲ್ದಾಣಗಳಿಗೆ ಐತಿಹಾಸಿಕ ಹಿನ್ನಲೆಯ ವ್ಯಕ್ತಿಗಳ ಹೆಸರನ್ನಿಡಲು ಸರ್ಕಾರ ಚಿಂತನೆ 

ಬೆಂಗಳೂರು ವಿಮಾನ ನಿಲ್ದಾಣದಂತೆ ರಾಜ್ಯದ ಹಲವು ವಿಮಾನ ನಿಲ್ದಾಣಗಳಿಗೆ ಐತಿಹಾಸಿಕ ವ್ಯಕ್ತಿಗಳ ಹೆಸರನ್ನಿಡಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯದ 5 ವಿಮಾನ ನಿಲ್ದಾಣಗಳಿಗೆ ಐತಿಹಾಸಿಕ ಹಿನ್ನಲೆಯ ವ್ಯಕ್ತಿಗಳ ಹೆಸರನ್ನಿಡಲು ಸರ್ಕಾರ ಚಿಂತನೆ 
Updated on: 

ಬೆಳಗಾವಿ: ಬೆಂಗಳೂರು ವಿಮಾನ ನಿಲ್ದಾಣದಂತೆ ರಾಜ್ಯದ ಹಲವು ವಿಮಾನ ನಿಲ್ದಾಣಗಳಿಗೆ ಐತಿಹಾಸಿಕ ವ್ಯಕ್ತಿಗಳ ಹೆಸರನ್ನಿಡಲು ರಾಜ್ಯ ಸರ್ಕಾರ ಮುಂದಾಗಿದೆ.


ಈ ಕುರಿತು ಅಂಗೀಕಾರಕ್ಕಾಗಿ ಬೆಳಗಾವಿ, ದಕ್ಷಿಣ ಕನ್ನಡ.ಮೈಸೂರು, ಧಾರವಾಡ ಮತ್ತು ಕಲಬುರಗಿ ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದ್ದು ವಿಮಾನ ನಿಲ್ದಾಣಗಳ ಮರು ನಾಮಕರಣ ಪ್ರಕ್ರಿಯೆ ಭರದಿಂದ ಸಾಗಿದೆ. ಆ ಪ್ರದೇಶದ ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಸಹ ಸರ್ಕಾರ ಕೇಳಿದೆ.


ಹುಬ್ಬಳ್ಳಿ, ಬೆಳಗಾವಿ ಮತ್ತು ಕಲಬುರಗಿ ವಿಮಾನ ನಿಲ್ದಾಣಗಳಿಗೆ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ವಿಮಾನ ನಿಲ್ದಾಣಗಳು ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಬರುತ್ತದೆ. 


ರಾಜ್ಯ ಮೂಲಭೂತ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ 5 ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಕಳೆದ ತಿಂಗಳು ಪತ್ರ ಕಳುಹಿಸಿ ಆಯಾ ಪ್ರದೇಶಗಳ ಐತಿಹಾಸಿಕ ಮಹತ್ವ ಮತ್ತು ಅಲ್ಲಿನ ಖ್ಯಾತ ವ್ಯಕ್ತಿಗಳ ಬಗ್ಗೆ ಮಾಹಿತಿ ಕೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com