ಹಾಸನ: ಸಾಲ ನೀಡದ್ದಕ್ಕೆ ಮಾಲೀಕನನ್ನೇ ಕೊಲೆ ಮಾಡಿದ ಚಾಲಕ

ವಡ್ಡರಹಟ್ಟಿಯ ನಾಗೇಶ್ ಸಿದ್ಧಾಬೋವಿ(47) ಕೊಲೆಯಾದ ಮಾಲೀಕ . ಟ್ರ್ಯಾಕ್ಟರ್  ಚಾಲಕ ರಂಗಸ್ವಾಮಿ ಮಾಲೀಕರಾದ ನಾಗೇಶ್ ಬಳಿ 2 ಸಾವಿರ ರೂ. ಸಾಲ ಕೇಳಿದ್ದನು. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಮೊದಲು ಮೃತ ನಾಗೇಶ್​​, ರಂಗಸ್ವಾಮಿ ಮೇಲೆ  ಕೈ ಮಾಡಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಹಾಸನ: ಸಾಲ ನೀಡದ್ದಕ್ಕೆ ಚಾಲಕನೋರ್ವ ಮಾಲೀಕನನ್ನು ಕೊಲೆ ಮಾಡಿರುವ ಘಟನೆ ಅರಸೀಕೆರೆ ತಾಲೂಕಿನ ಜಾವಗಲ್​​ನಲ್ಲಿ ನಡೆದಿದೆ.

ವಡ್ಡರಹಟ್ಟಿಯ ನಾಗೇಶ್ ಸಿದ್ಧಾಬೋವಿ(47) ಕೊಲೆಯಾದ ಮಾಲೀಕ . ಟ್ರ್ಯಾಕ್ಟರ್  ಚಾಲಕ ರಂಗಸ್ವಾಮಿ ಮಾಲೀಕರಾದ ನಾಗೇಶ್ ಬಳಿ 2 ಸಾವಿರ ರೂ. ಸಾಲ ಕೇಳಿದ್ದನು. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಮೊದಲು ಮೃತ ನಾಗೇಶ್​​, ರಂಗಸ್ವಾಮಿ ಮೇಲೆ  ಕೈ ಮಾಡಿದ್ದಾನೆ. 

ಇದರಿಂದ ಕುಪಿತಗೊಂಡ ರಂಗಸ್ವಾಮಿ ಚೂಪಾದ ಹಾರೆಯಿಂದ ಮಾಲೀಕನ  ಪಕ್ಕೆಲುಬಿಗೆ ಚುಚ್ಚಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ನಾಗೇಶ್, ಸ್ಥಳದಲ್ಲೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಅರಸೀಕೆರೆ ತಾಲೂಕು ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ರಂಗಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.
 
Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com