ಶಾಲೆಯಲ್ಲಿ ಬಾಟಲ್ ನೃತ್ಯ ಮಾಡಿದ್ದು ಶಿಕ್ಷಕಿಯರಲ್ಲ: ಸಚಿವ ಸುರೇಶ್ ಕುಮಾರ್

ಶಾಲೆಯ ವೇದಿಕೆಯಲ್ಲಿ ಬಾಟಲ್ ಹಿಡಿದು ನೃತ್ಯ ಮಾಡಿದ್ದು ಶಿಕ್ಷಕಿಯರಲ್ಲ, ಸಂಘಟನೆಯೊಂದರ ಮಹಿಳೆಯರು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ. 
ಶಿಕ್ಷಣ ಸಚಿವ ಸುರೇಶ್ ಕುಮಾರ್
ಶಿಕ್ಷಣ ಸಚಿವ ಸುರೇಶ್ ಕುಮಾರ್
Updated on: 

ಬೆಂಗಳೂರು: ಶಾಲೆಯ ವೇದಿಕೆಯಲ್ಲಿ ಬಾಟಲ್ ಹಿಡಿದು ನೃತ್ಯ ಮಾಡಿದ್ದು ಶಿಕ್ಷಕಿಯರಲ್ಲ, ಸಂಘಟನೆಯೊಂದರ ಮಹಿಳೆಯರು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ. 

ಶಾಲೆಯ ಆವರಣದಲ್ಲಿ ಮಹಿಳಾ ಸಂಘಟನೆಯೊಂದು ಹೊಸವರ್ಷಾಚರಣೆ ಆಯೋಜಿಸಿದ್ದು, ಈ ವೇಳೆ ಆ ಸಂಘಟನೆಯ ಮಹಿಳೆಯರು ನೃತ್ಯ ಮಾಡಿದ್ದಾರೆ. ವಿಡಿಯೋವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. 

ಅಸಭ್ಯ ನೃತ್ಯ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕರಿಗೆ ಕಾರಣ ಕೇಳಿ ಈ ಹಿಂದೆ ನೋಟಿಸ್ ಜಾರಿ ಮಾಡಲಾಗಿತ್ತು. ಘಟನೆಯಲ್ಲಿ ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಪಾತ್ರವಿಲ್ಲವೆಂದು ತಿಳಿದುಬಂದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಶಾಲಾ ವೇದಿಕೆಗಳ ಕುರಿತು ಜಾಗ್ರತೆ ವಹಿಸುವಂತೆ ಸೂಚಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com