ಬೆಂಗಳೂರು: ಬೈಕ್ ಗೆ ಲಾರಿ ಡಿಕ್ಕಿ, ಸವಾರ ಸಾವು

ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದಾಗ ಬೈಕ್ ಸವಾರನಿಗೆ ಸೇನಾಪಡೆಗೆ ಸೇರಿದ ಲಾರಿ ಡಿಕ್ಕಿ ಹೊ‌ಡೆದಿದ್ದು, ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ದುರ್ಘಟನೆ ಜಯಮಹಲ್ ರಸ್ತೆಯ ಅಮಾನುಲ್ಲಾ ಗೇಟ್ ಬಳಿ ಶುಕ್ರವಾರ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದಾಗ ಬೈಕ್ ಸವಾರನಿಗೆ ಸೇನಾಪಡೆಗೆ ಸೇರಿದ ಲಾರಿ ಡಿಕ್ಕಿ ಹೊ‌ಡೆದಿದ್ದು, ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ದುರ್ಘಟನೆ ಜಯಮಹಲ್ ರಸ್ತೆಯ ಅಮಾನುಲ್ಲಾ ಗೇಟ್ ಬಳಿ ಶುಕ್ರವಾರ ಸಂಭವಿಸಿದೆ.

ಸುಲ್ತಾನ್‌ಪಾಳ್ಯದ ದಿನೇಶ್ (30) ಮೃತಪಟ್ಟ ಬೈಕ್ ಸವಾರ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್, ಶುಕ್ರವಾರ ಮಧ್ಯಾಹ್ನ 2.30ರ ವೇಳೆ ಬೈಕ್‌ನಲ್ಲಿ ಜೆಸಿ ನಗರದಿಂದ ಮೇಖ್ರಿ ವೃತ್ತದ ಕಡೆಗೆ ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದಾಗ ಎದುರಿನಿಂದ ಬಂದ ಮಿಲ್ಟ್ರಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ದಿನೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 

ಘಟನೆಗೆ ಸಂಬಂಧಿಸಿದಂತೆ ಆರ್‌ಟಿ ನಗರ ಸಂಚಾರ ಪೊಲೀಸರು ಮಿಲ್ಟ್ರಿ ಲಾರಿ ಚಾಲಕನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com