ಆಪ್ತ ಸಹಾಯಕನಿಗೆ ಕೊರೋನಾ: ರಾಮದಾಸ್ ಹೋಮ್ ಕ್ವಾರಂಟೈನ್; ಎಂಎಲ್ ಎ ಪ್ರಸಾದ್ ಅಬ್ಬಯ್ಯಗೆ ಸೋಂಕು ದೃಢ

ಮೈಸೂರು ಶಾಸಕ ಎಸ್.ಎ.ರಾಮದಾಸ್ ಅವರ ಇಬ್ಬರು ಆಪ್ತ ಸಹಾಯಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ವಿಷಯವನ್ನು ಟ್ವಿಟರ್ ಮೂಲಕ ತಿಳಿಸಿರುವ ಮದಾಸ್, ಮುಂಜಾಗ್ರತಾ ಕ್ರಮವಾಗಿ 7 ದಿನಗಳ ಕಾಲ ಹೋಮ್ ಕ್ವಾರಂಟೈನ್ ಆಗುವುದಾಗಿ ಮಾಹಿತಿ ನೀಡಿದ್ದಾರೆ. 
ರಾಮದಾಸ್
ರಾಮದಾಸ್
Updated on: 

ಬೆಂಗಳೂರು: ಮೈಸೂರು ಶಾಸಕ ಎಸ್.ಎ.ರಾಮದಾಸ್ ಅವರ ಇಬ್ಬರು ಆಪ್ತ ಸಹಾಯಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ವಿಷಯವನ್ನು ಟ್ವಿಟರ್ ಮೂಲಕ ತಿಳಿಸಿರುವ ಮದಾಸ್, ಮುಂಜಾಗ್ರತಾ ಕ್ರಮವಾಗಿ 7 ದಿನಗಳ ಕಾಲ ಹೋಮ್ ಕ್ವಾರಂಟೈನ್ ಆಗುವುದಾಗಿ ಮಾಹಿತಿ ನೀಡಿದ್ದಾರೆ. 

"ನನ್ನ ಇಬ್ಬರು ಆಪ್ತ ಸಹಾಯಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಅವರು ಈಗಾಗಲೇ ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾನೂ ಕೂಡ ಮುಂಜಾಗ್ರತಾ ಕ್ರಮವಾಗಿ 7 ದಿನಗಳ ಕಾಲ ಹೋಮ್ ಕ್ವಾರಂಟೈನ್ ಆಗಿರುತ್ತೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಕೋರೋನಾ ಸೋಂಕು ದೃಢಪಟ್ಟಿದೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಅವರು, ತಾವು ಆರೋಗ್ಯವಾಗಿದ್ದು, ಶೀಘ್ರದಲ್ಲೇ ಗುಣಮುಖರಾಗುವುದಾಗಿ ತಿಳಿಸಿದ್ಧರೆ. ಜೊತೆಗೆ, "ನನ್ನೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರಲ್ಲಿ ಕೊರೊನಾ‌ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ತಪಾಸಣೆಗೆ ಒಳಗಾಗಬೇಕು" ಎಂದು ಮನವಿ ಮಾಡಿಕೊಂಡಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com