ಬೆಂಗಳೂರು: ಇಬ್ಬರು ಸುಪಾರಿ‌ ಕಿಲ್ಲರ್ಸ್ ಮೇಲೆ ಪೊಲೀಸ್ ಫೈರಿಂಗ್

ಇಬ್ಬರು ಸುಪಾರಿ ಕಿಲ್ಲರ್ಸ್‌ಗಳ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ನಗರದ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ನಡೆದಿದೆ.
ಸುಪಾರಿ ಕೊಲೆಗಾರರು
ಸುಪಾರಿ ಕೊಲೆಗಾರರು
Updated on

ಬೆಂಗಳೂರು: ಇಬ್ಬರು ಸುಪಾರಿ ಕಿಲ್ಲರ್ಸ್‌ಗಳ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ನಗರದ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ನಡೆದಿದೆ.

ಭರತ್‌, ಅರುಣ್‌ ಗುಂಡೇಟು ತಿಂದು ಬಂಧನಕ್ಕೊಳಗಾದ ಸುಪಾರಿ ಕಿಲ್ಲರ್ಸ್‌ಗಳು.

ಜಮೀನು ವಿಚಾರಕ್ಕೆ ಅರುಣ್ ಮತ್ತು ಭರತ್ ಕಳೆದ ಕೆಲ ದಿನಗಳ ಹಿಂದೆ ರಾಜಶೇಖರ್ ಎಂಬವರು ಹತ್ಯೆ ಮಾಡಲು10 ಲಕ್ಷ ರೂ. ಸುಪಾರಿ ಪಡೆದಿದ್ದರು. ನಂತರ ಇದೇ ತಿಂಗಳ 23 ರಂದು ಹೆಸರಘಟ್ಟ ಬಳಿ ಯುವಕರ ಗುಂಪೊಂದು ಕಟ್ಟಿಕೊಂಡು ರಾಜಶೇಖರ್‌ ಅವರ ಕೊಲೆಗೆ ಯತ್ನಿಸಿದ್ದರು.

ಆರೋಪಿಗಳ ಬಂಧನಕ್ಕೆ ಸೋಲದೇವನಹಳ್ಳಿ ಪೋಲೀಸರು ತೆರಳಿದ್ದ ವೇಳೆ ಪೋಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.  ಆಗ ಮೊದಲು ಪೋಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಆದರೆ ಆರೋಪಿಗಳು ಶರಣಾಗಲು ಒಪ್ಪದಿದ್ದಾಗ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಘಟನೆಯಲ್ಲಿ ಇಬ್ಬರು ಹೆಡ್​​ಕಾನ್ಸ್​​ಟೇಬಲ್ ಗಳಿಗೆ ಗಾಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com