ಹೊಸಪೇಟೆ: ಮದುವೆಗೆ ಆಮಂತ್ರಣ ನೀಡಲು ತೆರಳುತ್ತಿದ್ದ ತೆಪ್ಪ ಮುಳುಗಿ ಇಬ್ಬರು ಜಲಸಮಾಧಿ!

ಹಗರಿಬೊಮ್ಮನಹಳ್ಳಿ ತಾಲೂಕು ಸೀಗನಹಳ್ಳಿ ಗ್ರಾಮದ ಬಳಿಯ ತುಂಗಭದ್ರ ನದಿಯಲ್ಲಿ ತೆಪ್ಪ ಮುಗುಚಿ ಇಬ್ಬರು ಯುವಕರು ಜಲಸಮಾಧಿಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಹೊಸಪೇಟೆ: ಹಗರಿಬೊಮ್ಮನಹಳ್ಳಿ ತಾಲೂಕು ಸೀಗನಹಳ್ಳಿ ಗ್ರಾಮದ ಬಳಿಯ ತುಂಗಭದ್ರ ನದಿಯಲ್ಲಿ ತೆಪ್ಪ ಮುಗುಚಿ ಇಬ್ಬರು ಯುವಕರು ಜಲಸಮಾಧಿಯಾಗಿದ್ದಾರೆ. 

ಮೃತರನ್ನು ಫಕ್ರುದ್ದೀನ್(18) ಮತ್ತು ಯಮುನೂರಪ್ಪ(28) ಮೃತ ದುರ್ದೈವಿಗಳು. ಇವರು ಸೀಗನ ಹಳ್ಳಿಯಿಂದ ಕೊಪ್ಪಳದ ಕಡೆಗೆ ಹೊರಟಿದ್ದಾಗ ಈ ದುರಂತ ಸಂಭವಿಸಿದೆ. 

ತೆಪ್ಪದಲ್ಲಿ ಬೈಕ್ ಇದ್ದ ಕಾರಣ ಭಾರ ಹೆಚ್ಚಾಗಿ ಗಾಳಿಗೆ ಮೊಗಚಿದೆ ಎನ್ನಲಾಗಿದೆ. ಸಂಬಂಧಿಗಳಿಗೆ ಮದುವೆ ಆಮಂತ್ರಣ ನೀಡಲು ಕೊಪ್ಪಳ ಜಿಲ್ಲೆಯ ಗ್ರಾಮವೊಂದಕ್ಕೆ ತೆರಳುತಿದ್ದ ಮೃತರು.

ಇನ್ನು ತಂಬ್ರಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com