ರಾಯಚೂರು; ಆಸ್ತಿ ಹಂಚಿಕೆ ವಿವಾದ, ಸಹೋದರಳಿಯರಿಂದ ಮಾವನ ಕೊಲೆ

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಮ್ಮ ಮಾವನನ್ನೇ ಇಬ್ಬರು ಸೋದರಳಿಯಂದಿರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಂಡ್ರಾಳು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ರಾಯಚೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಮ್ಮ ಮಾವನನ್ನೇ ಇಬ್ಬರು ಸೋದರಳಿಯಂದಿರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಂಡ್ರಾಳು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

48 ವರ್ಷದ ವಿರೂಪಾಕ್ಷಗೌಡ ಕೊಲೆಯಾದವರು. ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಚಾರವಾಗಿ ವಿರೂಪಾಕ್ಷಗೌಡ ಹಾಗೂ ಅವರ ಸಹೋದರಿ ನಡುವಿನ ವಿವಾದ ತಾರಕಕ್ಕೇರಿ‌ದೆ. ಪರಿಣಾಮ ಅವರ ಅಕ್ಕನ ಮಕ್ಕಳಾದ ಮಲ್ಲಿಕಾರ್ಜುನ ಗೌಡ ಮತ್ತು‌ ಸಿದ್ದಬಸವನಗೌಡ, ವಿರೂಪಾಕ್ಷಗೌಡ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಜಮೀನಿನಲ್ಲಿ ಕೊಲೆ‌ಮಾಡಿದ್ದಾರೆ. ಬಳಿಕ ರಾತ್ರಿಯೇ ಪೊಲೀಸರಿಗೆ ಶರಣಾಗಿದ್ದಾರೆ.

ಸಿರುಗುಪ್ಪ ಪೊಲೀಸ್ ಠಾಣೆಯ ಸಿಪಿಐ ನೇತೃತ್ವದ ತಂಡ ಬಂಡ್ರಾಳು ಗ್ರಾಮದ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com