ಕರ್ನಾಟಕದಲ್ಲಿ ಕೊರೋನಾ ಆಸ್ಫೋಟ: ಒಂದೇ ದಿನ ದಾಖಲೆಯ 1267 ಮಂದಿಗೆ ಸೋಂಕು, 16 ಬಲಿ!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಏರಿಕೆ ಕಾಣುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ 1 ಸಾವಿರದ ಗಡಿ ದಾಟಿದೆ. ಬೆಂಗಳೂರು ನಗರವೊಂದರಲ್ಲೇ 783 ಪ್ರಕರಣಗಳು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 1267 ಪ್ರಕರಣಗಳು ವರದಿಯಾಗಿದ್ದು, 16 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 13190ಕ್ಕೇರಿಕೆಯಾಗಿದ್ದು, ಮೃತರ ಸಂಖ್ಯೆ 211 ತಲುಪಿದೆ.
ರಾಜ್ಯದಲ್ಲಿ ಒಟ್ಟು 7507 ಮಂದಿ ಗುಣಮುಖರಾಗಿದ್ದು, 5472 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 243 ಮಂದಿ ಗಂಭೀರ ಸ್ಥಿತಿಯಲ್ಲಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ 783, ದಕ್ಷಿಣ ಕನ್ನಡದಲ್ಲಿ 97, ಬಳ್ಳಾರಿಯಲ್ಲಿ 71, ಉಡುಪಿಯಲ್ಲಿ 40, ಕಲಬುರಗಿಯಲ್ಲಿ 34, ಹಾಸನದಲ್ಲಿ 31, ಗದಗದಲ್ಲಿ 30, ಬೆಂಗಳೂರು ಗ್ರಾಮಾಂತರದಲ್ಲಿ 27, ಧಾರವಾಡದಲ್ಲಿ 18, ಮೈಸೂರಿನಲ್ಲಿ 18, ಬಾಗಲಕೋಟೆಯಲ್ಲಿ 17, ಉತ್ತರ ಕನ್ನಡದಲ್ಲಿ 14, ಹಾವೇರಿಯಲ್ಲಿ 12, ಕೋಲಾರದಲ್ಲಿ 11, ಬೆಳಗಾವಿಯಲ್ಲಿ 8, ಬೀದರ್, ಚಿತ್ರದುರ್ಗದಲ್ಲಿ ತಲಾ 7, ರಾಯಚೂರು, ಮಂಡ್ಯ, ದಾವಣಗೆರೆಯಲ್ಲಿ ತಲಾ 6, ವಿಜಯಪುರದಲ್ಲಿ ತಲಾ 5, ಶಿವಮೊಗ್ಗದಲ್ಲಿ 4, ಚಿಕ್ಕಬಳ್ಳಾಪುರ, ಕೊಪ್ಪಳ, ಚಿಕ್ಕಮಗಳೂರು, ಕೊಡಗಿನಲ್ಲಿ ತಲಾ 2, ತುಮಕೂರಿನಲ್ಲಿ 2, ಯಾದಗಿರಿಯಲ್ಲಿ 1 ಪ್ರಕರಣ ವರದಿಯಾಗಿವೆ.
ಧಾರವಾಡದಲ್ಲಿ 71 ವರ್ಷದ ಮಹಿಳೆ, ಹಾಸನದಲ್ಲಿ 60 ವರ್ಷದ ಮಹಿಳೆ, ಬೆಂಗಳೂರು ನಗರದಲ್ಲಿ 66, 62,55 ವ್ಯಕ್ತಿಗಳು, ಬಾಗಲಕೋಟೆಯಲ್ಲಿ 55, ದಕ್ಷಿಣ ಕನ್ನಡದಲ್ಲಿ 48 ವರ್ಷದ ಮಹಿಳೆ, ಮೈಸೂರಿನಲ್ಲಿ 70, ತುಮಕೂರಿನಲ್ಲಿ 76 ವರ್ಷದ ಮಹಿಳೆ, 40 ವರ್ಷದ ವ್ಯಕ್ತಿ, ಬೆಂಗಳೂರು ನಗರದಲ್ಲಿ 65, ಬಾಗಲಕೋಟೆಯಲ್ಲಿ 50, ಬಳ್ಳಾರಿಯಲ್ಲಿ 57, ಕಲಬುರಗಿಯಲ್ಲಿ 65, ದಕ್ಷಿಣ ಕನ್ನಡದಲ್ಲಿ 31 ವರ್ಷದ ವ್ಯಕ್ತಿ 51 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


