

ಬೆಂಗಳೂರು: ಗಂಡನೊಂದಿಗೆ ಸೇರಿ ಪತ್ನಿಯೊಬ್ಬಳು ಹಣಕ್ಕಾಗಿ ತನ್ನ ತಾಯಿಯಲ್ಲೇ ಹತ್ಯೆಗೈದು ಸ್ವಾಭಾವಿಕ ಮರಣವೆಂಬಂತೆ ಸಾಬೀತುಪಡಿಸಿಲು ಯತ್ನಿಸಿ ಸಿಕ್ಕಿ ಬಿದ್ದ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ವೈಯಾಲಿಕಾವಲ್ ನಿವಾಸಿ ಅನುಸೂಯಾ ಕೊಲೆಯಾದ ತಾಯಿ. ಅವರನ್ನು ಹತ್ಯೆ ಮಾಡಿದ ಆರೋಪಿಗಳಾದ ಪುತ್ರಿ ವೇಣಿ ಹಾಗೂ ಅಳಿಯ ರಾಜು ಎಂಬವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಅನುಸೂಯಾ ಅವರ ಮನೆಗೆ ಫೆಬ್ರವರಿ ತಿಂಗಳಲ್ಲಿ ಮನೆಗೆ ಮಗಳು ವೇಣಿ ಮತ್ತು ಆಕೆಯ ಗಂಡ ರಾಜು ಬಂದಿದ್ದಾರೆ, ಈ ವೇಳೆ ಹಣಕ್ಕಾಗಿ ಅವರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ವೇಳೆ ವೇಣಿ ಮತ್ತು ಆಕೆಯ ಗಂಡ ರಾಜು ಅವರು ಅನುಸೂಯಾ ಅವರ ಮೇಲೆ ತೀವ್ರವಾಗಿ ಹಲ್ಲೆ ಮಾಡಿ ಉಸಿರುಗಟ್ಟಿ ಹಲ್ಲೆ ನಡೆಸಿದ್ದಾರೆ, ಈ ವೇಳೆ ರಕ್ತದೊತ್ತಡ ಕಡಿಮೆಯಾಗಿ ಅನುಸೂಯಾ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.