ಕೊರೋನಾ ವೈರಸ್: ವ್ಯಕ್ತಿಯಲ್ಲಿ ಪಾಸಿಟಿವ್ ಆಗಿದ್ದ ವೈರಸ್ 3 ದಿನಗಳ ಬಳಿಕ ನೆಗೆಟಿವ್ ಆಯ್ತು!

45 ವರ್ಷದ ವ್ಯಕ್ತಿಯೋರ್ವರಲ್ಲಿ ಪಾಸಿಟಿವ್ ಎಂದು ಬಂದಿದ್ದ ಮಹಾಮಾರಿ ಕೊರೋನಾ ವೈರಸ್ ಇದೀಗ ಮೂರು ದಿನಗಳ ಬಳಿಕ ಪರೀಕ್ಷೆ ನಡೆಸಿದಾಗ ನೆಗೆಟಿವ್ ಎಂದು ಬಂದಿರುವ ಆಶ್ಚರ್ಯಕರ ಘಟನೆ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಚೆನ್ನೈ: 45 ವರ್ಷದ ವ್ಯಕ್ತಿಯೋರ್ವರಲ್ಲಿ ಪಾಸಿಟಿವ್ ಎಂದು ಬಂದಿದ್ದ ಮಹಾಮಾರಿ ಕೊರೋನಾ ವೈರಸ್ ಇದೀಗ ಮೂರು ದಿನಗಳ ಬಳಿಕ ಪರೀಕ್ಷೆ ನಡೆಸಿದಾಗ ನೆಗೆಟಿವ್ ಎಂದು ಬಂದಿರುವ ಆಶ್ಚರ್ಯಕರ ಘಟನೆ ನಡೆದಿದೆ. 

ತಮಿಳುನಾಡಿನ ವ್ಯಕ್ತಿಯೊರ್ವರಲ್ಲಿ ಈ ರೀತಿಯ ಕಂಡು ಬಂದಿದ್ದು, ಇದೀಗ ಮತ್ತೆ ಮೂರನೇ ಬಾರಿ ಪರೀಕ್ಷೆ ನಡೆಸಲು ಹಿರಿಯ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. 

ಮೂರನೇ ಬಾರಿ ವ್ಯಕ್ತಿಯನ್ನು ಪರೀಕ್ಷೆ ನಡೆಸಲಾಗುತ್ತಿದ್ದು, ಒಂದು ವೇಳೆ ಈ ಪರೀಕ್ಷೆಯಲ್ಲಿಯೂ ನೆಗೆಟಿವ್ ಎಂದು ಬಂದಿದ್ದೇ ಆದರೆ, ವ್ಯಕ್ತಿ ದಾಖಲಾಗಿರುವ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಬಿಡುಗಡೆಗೊಂಡ ಬಳಿಕವೂ ವ್ಯಕ್ತಿಯ ಮೇಲೆ 28 ದಿನಗಳ ಕಾಲ ನಿಗಾ ಇಡಲಾಗುತ್ತದೆ ಎಂದು ಹೇಳಿದ್ದಾರೆ. 

ಒಮನ್ ನಿಂದ ಫೆಬ್ರವರಿ 28 ರಂದು ಚೆನ್ನೈಗೆ ವ್ಯಕ್ತಿ ಬಂದಿದ್ದು, ಇದಾದ ಕೆಲವೇ ದಿನಗಳ ಬಳಿಕ ವ್ಯಕ್ತಿಯಲ್ಲಿ ವೈರಸ್ ಸೋಂಕುಗಳು ಕಂಡು ಬಂದಿತ್ತು. 

ಕೊರೋನಾ ವೈರಸ್ ಶಂಕೆ ಮೇರೆಗೆ ಈ ವರೆಗೂ 8 ಮಂದಿಯಲ್ಲಿ ನಡೆಸಲಾದ ಪರೀಕ್ಷೆ ನಗೆಟಿವ್ ಹಂದಿದ್ದು, ಯಾರೂ ಭೀತಿಗೊಳಗಾಗಬಾರದು ಎಂದು ತಮಿಳುನಾಡು ಆರೋಗ್ಯ ಸಚಿವ ಸಿ.ವಿಜಯಭಾಸ್ಕರ್ ಅವರು ಹೇಳಿದ್ದಾರೆ. 

ಈ ನಡುವೆ ಇಟಲಿ ಹಾಗೂ ಅಮೆರಿಕಾದಿಂದ ಬಂದಿರುವ ಐವರನ್ನು ವಿಶೇಷ ಕೊಠಡಿಗಳಲ್ಲಿರಿಸಲಾಗಿದ್ದು, ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com