ನೀವಿರುವಲ್ಲೇ ಜಾಗೃತಿ ಮೂಡಿಸಿ ಎಂದ ಜಿಲ್ಲಾಧಿಕಾರಿಗೆ ನನ್ನನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದ ರೇಣುಕಾಚಾರ್ಯ

ಕಳೆದೆರಡು ದಿನಗಳಿಂದ ದಾವಣಗೆರೆ ಮತ್ತು ಮತಕ್ಷೇತ್ರ ಹೊನ್ನಾಳಿಯಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕೊರೋನಾ ವೈರಸ್ ನಿಯಂತ್ರಣ ಕುರಿತ ಜಾಗೃತಿಗಾಗಿ ಓಡಾಡುತ್ತಿದ್ದು, ಅವರ ಹಿಂದೆ ಬೆಂಬಲಿಗರು ಕಾರ್ಯಕರ್ತರ ಪಡೆಯೇ ತಿರುಗುತ್ತಿದೆ.
ರೇಣುಕಾಚಾರ್ಯ
ರೇಣುಕಾಚಾರ್ಯ
Updated on: 

ದಾವಣಗೆರೆ: ಕಳೆದೆರಡು ದಿನಗಳಿಂದ ದಾವಣಗೆರೆ ಮತ್ತು ಮತಕ್ಷೇತ್ರ ಹೊನ್ನಾಳಿಯಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕೊರೋನಾ ವೈರಸ್ ನಿಯಂತ್ರಣ ಕುರಿತ ಜಾಗೃತಿಗಾಗಿ ಓಡಾಡುತ್ತಿದ್ದು, ಅವರ ಹಿಂದೆ ಬೆಂಬಲಿಗರು ಕಾರ್ಯಕರ್ತರ ಪಡೆಯೇ ತಿರುಗುತ್ತಿದೆ.

ಸಾಮಾಜಿಕ ಅಂತರದ ಬಗ್ಗೆ ಪಾಠ ಹೇಳುವ ರೇಣುಕಾಚಾರ್ಯರ ಹಿಂಬಾಲಿಕರು ಮಾತ್ರ ದಂಡುದಂಡಾಗಿ ರಸ್ತೆಗಳಿಗೆ ಲಗ್ಗೆ ಇಡುತ್ತಿದ್ದಾರೆ. ಇದನ್ನು ಗಮನಿಸಿದ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಶಾಸಕ ರೇಣುಕಾಚಾರ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಚಾರಕ್ಕಾಗಿ ಓಡಾಡುವುದನ್ನು ನಿಲ್ಲಿಸುವಂತೆ ಸೂಚಿಸಿರುವ ಜಿಲ್ಲಾಧಿಕಾರಿಗಳು, ಶಾಸಕರ ಜತೆ ಹಲವಾರು ಜನರಿದ್ದ ಕಾರಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನೀವಿರುವ ಜಾಗದಲ್ಲೇ ಮಾಡಿ ಎಂದು ಸಲಹೆ ನೀಡಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ಮಹಾಮಾರಿಗೆ 3 ಮಂದಿ ಬಲಿಯಾಗಿದ್ದು ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com