ರಾಜ್ಯ

ಕೇಂದ್ರ ಸರ್ಕಾರದ ರೆಡ್ ಝೋನ್ ಪಟ್ಟಿಯಲ್ಲಿ ರಾಜ್ಯದ 15 ಜಿಲ್ಲೆ, ಬೆಂಗಳೂರಿನ 15 ವಾರ್ಡ್​ಗಳು; ಇಲ್ಲಿದೆ ಸಂಪೂರ್ಣ ಪಟ್ಟಿ

ಕೇಂದ್ರ ಸರ್ಕಾರದ ರೆಡ್ ಝೋನ್ ಪಟ್ಟಿಯಲ್ಲಿ ರಾಜ್ಯದ 15 ಜಿಲ್ಲೆ, ಬೆಂಗಳೂರಿನ 15 ವಾರ್ಡ್​ಗಳು; ಇಲ್ಲಿದೆ ಸಂಪೂರ್ಣ ಪಟ್ಟಿ
ಸಂಗ್ರಹ ಚಿತ್ರ
Published On :

ಬೆಂಗಳೂರು: ಎರಡನೇ ಲಾಕ್ ಡೌನ್ ಮುಕ್ತಾಯದ ಹಂತದಲ್ಲಿರುವಂತೆಯೇ ಕೇಂದ್ರ ಸರ್ಕಾರ ಸೋಂಕಿನ ತೀವ್ರತೆ ಆಧಾರದ ಮೇಲೆ ಹಸಿರು, ಕಿತ್ತಳೆ ಮತ್ತು ಕೆಂಪು ಎಂಬ 3 ಪಟ್ಟಿ ಮಾಡಿದ್ದು, ದೇಶಾದ್ಯಂತ 733 ಜಿಲ್ಲೆಗಳನ್ನ ಈ 3 ಪಟ್ಟಿಗೆ ವಿಭಜಿಸಿದೆ

ಹೌದು.. ರಾಜ್ಯದ ಕೆಲ ಜಿಲ್ಲೆಗಳು ಮತ್ತು ರಾಜಧಾನಿ ಬೆಂಗಳೂರು ನಗರದ ವಿವಿಧೆಡೆ ಹೆಚ್ಚಿನ ಕೊರೋನಾ ಪ್ರಕರಣಗಳು ಪತ್ತೆಯಾಗಿರುವುದನ್ನು ಗಮನಿಸಿ ಅಂಥವನ್ನು ರೆಡ್ ಜೋನ್ ಪಟ್ಟಿಗೆ ಸೇರಿಸಲಾಗಿದೆ. ಕೇಂದ್ರ ಸರ್ಕಾರ ಹಸಿರು, ಕಿತ್ತಳೆ ಮತ್ತು ಕೆಂಪು ಎಂಬ 3 ಪಟ್ಟಿ ಮಾಡಿದ್ದು,  ದೇಶಾದ್ಯಂತ 733 ಜಿಲ್ಲೆಗಳನ್ನ ಈ 3 ಪಟ್ಟಿಗೆ ವಿಭಜಿಸಿದೆ. ಕರ್ನಾಟಕದ ಬೆಂಗಳೂರು, ಬೆಂ. ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಗಳು ರೆಡ್ ಜೋನ್ ಪಟ್ಟಿಯಲ್ಲಿವೆ. ಇದೇ ವೇಳೆ, ರಾಜ್ಯ ಸರ್ಕಾರ ಕೂಡ ತನ್ನದೇ ಕೆಂಪು ಪಟ್ಟಿ ಬಿಡುಗಡೆ ಮಾಡಿದೆ.

ದಿನಗಳಲ್ಲಿ ಸೋಂಕಿನ ತೀವ್ರತೆ ಆಧಾರದ ಮೇಲೆ ಪ್ರದೇಶವಾರು ಲಾಕ್ ಡೌನ್ ಸಡಿಲಿಕೆ ಆಗುವ ಸಾಧ್ಯತೆ ಇದ್ದು, ರೆಡ್ ಜೋನ್ ಇರುವ ಪ್ರದೇಶಗಳಲ್ಲಿ ಬಹುತೇಕ ಲಾಕ್ ಡೌನ್ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ರಾಜಧಾನಿ ಬೆಂಗಳೂರು ನಗರ ಸೇರಿದಂತೆ ನಂಜನಗೂಡು ನಂಜಿನಿಂದ ಬಳಲುತ್ತಿರುವ ಮೈಸೂರು, ತಬ್ಲೀಘಿ ಜಮಾತ್ ಸೋಂಕಿನಿಂದ ಬಳಲುತ್ತಿರುವ ಕಲಬುರ್ಗಿ ಮತ್ತು ವಿಜಯಪುರ ಸೇರಿದಂತೆ ಒಟ್ಟು 15 ಜಿಲ್ಲೆಗಳು ಕೆಂಪು ಪಟ್ಟಿಯಲ್ಲಿವೆ. ಈ ಜಿಲ್ಲೆಗಳಲ್ಲಿ ಅತಿ ಹೆಚ್ಚು  ಸೋಂಕು ಇರುವ ಪ್ರದೇಶಗಳನ್ನು ಗುರುತಿಸಿ ಪ್ರತ್ಯೇಕ ಕೆಂಪು ಪಟ್ಟಿ ಮಾಡಲಾಗಿದೆ. 

ರೆಡ್ ಜೋನ್ ಜಿಲ್ಲೆಗಳು:
ಬೆಂಗಳೂರು ನಗರ , ಮೈಸೂರು, ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಮಂಡ್ಯ, ಬೀದರ್, ದಕ್ಷಿಣ ಕನ್ನಡ, ಬಳ್ಳಾರಿ, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ತುಮಕೂರು ಮತ್ತು ದಾವಣಗೆರೆ ರೆಡ್ ಝೋನ್ ನಲ್ಲಿವೆ.

ರಾಜಧಾನಿ ಬೆಂಗಳೂರಿನಲ್ಲಿ 15 ವಾರ್ಡ್ ಗಳು ರೆಡ್ ಝೋನ್ ಪಟ್ಟಿಗೆ
ಇನ್ನು ಸಿಲಿಕಾನ್ ಸಿಟಿ ಹಾಗೂ ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಿರುವ 15 ವಾರ್ಡ್​ಗಳನ್ನು ಗುರುತಿಸಿ ರೆಡ್ ಝೋನ್ ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ಇಲ್ಲಿ ಅತೀ ಹೆಚ್ಚು ನಿಗಾ ವಹಿಸುವ ಸಾಧ್ಯತೆ ಇದೆ. 

ಬೆಂಗಳೂರು ನಗರದ ರೆಡ್ ಝೋ ವಾರ್ಡ್​ಗಳ ಪಟ್ಟಿ
ಯಶವಂತಪುರ (ವಾರ್ಡ್ ನಂಬರ್ 37), ಹಗದೂರು (ವಾರ್ಡ್ ನಂಬರ್ 84), ವಸಂತನಗರ (ವಾರ್ಡ್ ನಂಬರ್ 93), ಧರ್ಮರಾಯಸ್ವಾಮಿ ದೇವಸ್ಥಾನ (ವಾರ್ಡ್ ನಂಬರ್ 119), ಹಂಪಿನಗರ (ವಾರ್ಡ್ ನಂಬರ್ 133), ಬಾಪೂಜಿನಗರ (ವಾರ್ಡ್ ನಂಬರ್ 134), ಪಾದರಾಯನಪುರ (ವಾರ್ಡ್ ನಂಬರ್ 135),  ಜಗಜೀವನರಾಮನಗರ (ವಾರ್ಡ್ ನಂಬರ್ 136), ಕೆ ಆರ್ ಮಾರ್ಕೆಟ್ (ವಾರ್ಡ್ ನಂಬರ್ 139), ಚಾಮರಾಜಪೇಟೆ (ವಾರ್ಡ್ ನಂಬರ್ 140), ಹೊಂಬೇಗೌಡನಗರ (ವಾರ್ಡ್ ನಂಬರ್ 145), ದೀಪಾಂಜಲಿನಗರ (ವಾರ್ಡ್ ನಂಬರ್ 158), ಜಯನಗರ ಪೂರ್ವ (ವಾರ್ಡ್ ನಂಬರ್ 170), 189-ಹೊಂಗಸಂದ್ರ (ವಾರ್ಡ್ ನಂಬರ್ 189).

ಹೊಂಗಸಂದ್ರ ಮತ್ತು ಪಾದರಾಯನಪುರ ಬೆಂಗಳೂರಿನ ಪ್ರಮುಖ ಹಾಟ್ ಸ್ಪಾಟ್ ಎನಿಸಿವೆ. ಈ ಪೈಕಿ ಪಾದರಾಯನಪುರದಲ್ಲಿ 35 ಸೋಂಕಿತರಿದ್ದು, ಹೊಂಗಸಂದ್ರದಲ್ಲಿ 29 ಮಂದಿ ಸೋಂಕಿತರಿದ್ದಾರೆ. ಹೀಗಾಗಿ ಪಾದರಾಯನಪುರದ ಸಮೀಪವೇ ಇರುವ ಜಗಜೀವನರಾಮನಗರ, ಚಾಮರಾಜಪೇಟೆ, ದೀಪಾಂಜಲಿ ನಗರಕ್ಕೂ ಸೋಂಕು ವ್ಯಾಪಿಸಿರುವುದು ಪತ್ತೆಯಾಗಿದೆ. ಹೀಗೆ, ನಗರದ ವಿವಿಧೆಡೆ ಹೆಚ್ಚಿನ ಕೊರೋನಾ ಪ್ರಕರಣಗಳು ಪತ್ತೆಯಾಗಿರುವುದನ್ನು ಗಮನಿಸಿ ಅಂಥವನ್ನು ರೆಡ್ ಜೋನ್ ಪಟ್ಟಿಗೆ ಸೇರಿಸಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.