ಗ್ರೀನ್ ಜೋನ್ ಶಿವಮೊಗ್ಗಕ್ಕೂ ವಕ್ಕರಿಸಿದ ಕೊರೋನಾ: 8 ತಬ್ಲಿಘಿಗಳಿಗೆ ಸೋಂಕು!

ಕರ್ನಾಟಕಕ್ಕೆ ಕೊರೋನಾ ಮಹಾಮಾರಿ ದಾಂಗುಂಡಿ ಇಟ್ಟಿದ್ದರೂ ಇಲ್ಲಿಯವರೆಗೂ ಒಂದೇ ಒಂದು ಪ್ರಕರಣ ಪತ್ತೆಯಾಗದ ಶಿವಮೊಗ್ಗದಲ್ಲಿ ಇಂದು 8 ಪ್ರಕರಣಗಳು ಪತ್ತೆಯಾಗಿವೆ. 
ಕೆಎಸ್ ಈಶ್ವರಪ್ಪ
ಕೆಎಸ್ ಈಶ್ವರಪ್ಪ
Updated on: 

ಶಿವಮೊಗ್ಗ: ಕರ್ನಾಟಕಕ್ಕೆ ಕೊರೋನಾ ಮಹಾಮಾರಿ ದಾಂಗುಂಡಿ ಇಟ್ಟಿದ್ದರೂ ಇಲ್ಲಿಯವರೆಗೂ ಒಂದೇ ಒಂದು ಪ್ರಕರಣ ಪತ್ತೆಯಾಗದ ಶಿವಮೊಗ್ಗದಲ್ಲಿ ಇಂದು 8 ಪ್ರಕರಣಗಳು ಪತ್ತೆಯಾಗಿವೆ. 

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್ ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಸೋಂಕು ಪತ್ತೆಯಾಗಿರುವುದನ್ನು ದೃಢಪಡಿಸಿದ್ದಾರೆ. 

21 ತಬ್ಲಿಘಿಗಳು ಸೇರಿ 136 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಶಿವಮೊಗ್ಗ ಜಿಲ್ಲೆಯ ಹೊಳಲ್ಕೆರೆ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. 

ನಿನ್ನೆ 9 ಮಂದಿ ಗುಜರಾತ್ ನ ಅಹಮದಾಬಾದ್ ನಿಂದ  ಶಿವಮೊಗ್ಗಕ್ಕೆ ಆಗಮಿಸಿದ್ದರು. ಈ ಪೈಕಿ 8 ಜನರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು ಇವರೆಲ್ಲಾ ಸಿಎಂ ಬಿಎಸ್ ಯಡಿಯೂರಪ್ಪನವರ ತವರು ಕ್ಷೇತ್ರ ಶಿಕಾರಿಪುರದವರೇ ಆಗಿದ್ದಾರೆ. 

ಸದ್ಯ 8 ಮಂದಿ ಕೊರೋನಾ ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com