ರಾಜ್ಯ

ಮೇ 22ರೊಳಗೆ ಕೊರೋನಾ ತಹಬದಿಗೆ ತರುವ ಭರವಸೆಯಲ್ಲಿ ಬೆಳಗಾವಿ

ಮೇ 22ರೊಳಗೆ ಕೊರೋನಾ ತಹಬದಿಗೆ ತರುವ ಭರವಸೆಯಲ್ಲಿ ಬೆಳಗಾವಿ
ಸಂಗ್ರಹ ಚಿತ್ರ
Published On :

ಬೆಳಗಾವಿ: ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಗರದ ಬಳಿಕ ನಂತರದ ಸ್ಥಾನದಲ್ಲಿರುವ ಬೆಳಗಾವಿ, ಕೊರೋನಾ ನಿಗ್ರಹಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಮೇ.22ರೊಳಗೆ ಮಹಾಮಾರಿ ವೈರಸ್'ನ್ನು ನಿಯಂತ್ರಿಸುವ ಭರವಸೆಯಲ್ಲಿದೆ. 

ಶಂಕಿತ ಸೋಂಕಿತರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವ ಎಲ್ಲರನ್ನೂ ಪರೀಕ್ಷೆಗೊಳಪಡಿಸುವ ರ್ಯಾಪಿಡ್ ಟೆಸ್ಟ್ ಗಳನ್ನು ಕೈಗೊಲ್ಳಲಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ವೈರಸ್ ನಿಯಂತ್ರಣಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ ಈ ನಡುವೆ ಕ್ವಾರಂಟೈನ್ ಗೆ ಒಳಗಾಗಿರುವ ಬಹುತೇಕರ ಸಮಯ ಅಂತ್ಯಗೊಳಳುತ್ತಿದೆ. 

ಪ್ರಸ್ತುತ ತೆಗೆದುಕೊಳ್ಳುತ್ತಿರುವ ಕ್ರಮಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಸೋಂಕಿತ ರೋಗಿಗಳ ಸಂಖ್ಯೆ ಗುಣಮುಖರಾಗುತ್ತಿದ್ದು, ಕಂಟೈನ್ಮೆಂಟ್ ಝೋನ್ ಗಳ ಮೇಲೆ ಹೆಚ್ಚಿನ ನಿಗಾವಹಿಸಲಾಗುತ್ತದೆ. ಪ್ರಸ್ತುತ ಪೀರಣ್ವಾಡಿ ಹಾಗೂ ಯೆಲ್ಲೂರು ಎರಡೂ ಕಂಟೈನ್ಮೆಂಟ್ ಝೋನ್ ಗಳಾಗಿದ್ದು, ಶೀಘ್ರದಲ್ಲಿಯೇ ಈ ಝೋನ್ ಗಳನ್ನು ಸ್ವತಂತ್ರಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಮಹಾರಾಷ್ಟ್ರ ಗಡಿಯಿಂದ ರಾಜ್ಯ ಪ್ರವೇಶಿಸುವ ಪ್ರತೀಯೊಬ್ಬರನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಪರೀಕ್ಷೆಗೊಳಪಡಿಸಲಾಗುತ್ತಿದೆ. ಅಲ್ಲದೆ, ಕ್ವಾರಂಟೈನ್ ನಲ್ಲಿರುವಂತೆಯೂ ಸೂಚಿಸಲಾಗುತ್ತಿದೆ. ಗಡಿಯಲ್ಲಿ ಪೊಲೀಸರು ಹೈಅಲರ್ಟ್ ಆಗಿದ್ದು, ಇತರೆ ಮಾರ್ಗಗಳ ಮೂಲಕ ಗಡಿ ಪ್ರವೇಶಿಸಲು ಹಲವರು ಸತತ ಯತ್ನ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ. 

ಹಿರೇಬಾಗೇವಾಡಿ ಹಾಗೂ ಕುಡ್ಚಿಯಲ್ಲಿ ಈ ವರೆಗೂ 107ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕುಡ್ಚಿಯಲ್ಲಿ 1,300ಕ್ಕೂ ಹೆಚ್ಚು ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಬೆಳಗಾವಿಯಲ್ಲಿ 7000 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗುತ್ತಿದ್ದು, ಬೆಂಗಳೂರು ಬಳಿಕ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಬೆಳಗಾವಿ ನಂತರದ ಸ್ಥಾನದಲ್ಲಿದೆ ಎಂದಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.