ಬಲವಂತದ ಬಂದ್ ಗೆ ಅವಕಾಶ ಕೊಡುವುದಿಲ್ಲ; ಕೆಟ್ಟದಾಗಿ ನಡೆದುಕೊಂಡರೆ ಕ್ರಮ ನಿಶ್ಚಿತ: ಮುಖ್ಯಮಂತ್ರಿ ಎಚ್ಚರಿಕೆ

ಬಲವಂತದಿಂದ ಎಲ್ಲೂ ಬಂದ್ ಮಾಡಲು ತಾವು ಅವಕಾಶ ಕೊಡುವುದಿಲ್ಲ ಎಂದು ಡಿಸೆಂಬರ್ 5ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ
Updated on: 

ಬೆಂಗಳೂರು: ಬಲವಂತದಿಂದ ಎಲ್ಲೂ ಬಂದ್ ಮಾಡಲು ತಾವು ಅವಕಾಶ ಕೊಡುವುದಿಲ್ಲ ಎಂದು ಡಿಸೆಂಬರ್ 5ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಕನ್ನಡದ ಪರವಾಗಿ, ಕನ್ನಡಿಗರ ಪರವಾಗಿ ಇರುವಂಥವನು, ಕನ್ನಡಿಗರಿಗೆ ಬೇಕಾದ ಹೆಚ್ಚಿನ ಸೌಲಭ್ಯ ಒದಗಿಸಲು ತಾವು ಸಿದ್ಧ. ಬೇರೆ ಬೇರೆ ಕಾರಣಗಳಿಗಾಗಿ ಬಂದ್ ಕರೆ ಕೊಡುವುದು ಸೂಕ್ತ ಅಲ್ಲ. ರಾಜ್ಯದ ಜನ ಇದನ್ನು ಮೆಚ್ಚುವುದಿಲ್ಲ. ಬಲವಂತದಿಂದ ಎಲ್ಲೂ ಬಂದ್ ಮಾಡಲು ತಾವು ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಪಪಡಿಸಿದರು.

ಪ್ರತಿಭಟನಕಾರರು ಪ್ರತಿಕೃತಿ‌ ದಹನ ಮಾಡುವುದು, ಕೆಟ್ಟದಾಗಿ ನಡೆದುಕೊಳ್ಳುತ್ತಿರುವುದನ್ನು ಗಮನಿಸುತ್ತಿದ್ದೇನೆ, ಇಂತಹವರ ವಿರುದ್ಧ ಬಹಳ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ, ಪ್ರತಿಭಟನೆಗೆ ಬೇರೆ ಸ್ಚರೂಪ ಕೊಡುವುದು ಸರಿಯಲ್ಲ. ಎಲ್ಲ ವರ್ಗಗಳಿಗೂ ಸರ್ಕಾರ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ. ಸರ್ಕಾರ ಯಾರ ನಡುವೆಯೂ ಭೇದ ಭಾವ ಮಾಡುತ್ತಿಲ್ಲ. ಸರ್ಕಾರದ ಉದ್ದೇಶ ಅರ್ಥ ಮಾಡಿಕೊಂಡು ಸಹಕಾರ ಕೊಡಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com