ವಿರೇಂದ್ರ ಖಾನ್ನಾ
ವಿರೇಂದ್ರ ಖಾನ್ನಾ

ಡ್ರಗ್ ಕೇಸ್: ವಿರೇಂದ್ರ ಖಾನ್ನಾಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಸಿಸಿಬಿಗೆ ಕೋರ್ಟ್ ಅನುಮತಿ

ಸ್ಯಾಂಡಲ್ ವುಡ್ ಡ್ರಗ್ ಕೇಸಿನ ಪ್ರಮುಖ ಆರೋಪಿಯಾಗಿರುವ ವಿರೇಂದ್ರ ಖಾನ್ನಾ ಮೇಲೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು  ಸಿಸಿಬಿ ತಂಡ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದೆ.

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಕೇಸಿನ ಪ್ರಮುಖ ಆರೋಪಿಯಾಗಿರುವ ವಿರೇಂದ್ರ ಖಾನ್ನಾ ಮೇಲೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು  ಸಿಸಿಬಿ ತಂಡ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದೆ.

ವಿಚಾರಣೆ ವೇಳೆಯಲ್ಲಿ ಖಾನ್ನಾ ಪೊಲೀಸರಿಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸುತ್ತಿದ್ದು, ಹಲವಾರು ಅಂಶಗಳನ್ನು ಮರೆ ಮಾಚುತ್ತಿದ್ದಾನೆ. 

ವಿಚಾರಣೆಗೆ ಸಹಕರಿಸದೆ ಗ್ಯಾಡ್ಜೆಟ್ ಪಾಸ್ ವರ್ಡ್ ನೀಡಲು ಸತಾಯಿಸುತ್ತಿರುವ ವಿರೇಂದ್ರ ಖಾನ್ನಾ ಮೇಲೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವು. ಅದಕ್ಕೆ ನ್ಯಾಯಾಲಯ ಒಪ್ಪಿಗೆ ನೀಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ ವಿಶ್ಲೇಷಣೆಗೆ ಕಳುಹಿಸಲಾಗಿದ್ದ ಆರೋಪಿಯ ಕೂದಲಿನ ಸ್ಯಾಂಪಲ್ ವರದಿ ಬಂದಿದ್ದು, ಅದು ಕೂಡಾ ವಿಚಾರಣೆ ವೇಳೆಯಲ್ಲಿ ಪರಿಣಾಮ ಬೀರಲಿದೆ. ರಕ್ತ ಹಾಗೂ ಮೂತ್ರದ ಮಾದರಿಯನ್ನುಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿದೆ. ಇದೇ ಮೊದಲ ಬಾರಿಗೆ ಹೆಚ್ಚುವರಿ ಸಾಕ್ಷ್ಯವಾಗಿ ಕೂದಲಿನ ಸ್ಯಾಂಪಲ್ ಪರೀಕ್ಷೆ ಮಾಡಿಸಲಾಗಿದೆ ಎಂದು ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com