ಮೈಸೂರು: ಬೀಗ ಹಾಕಿದ ಮನೆಯಿಂದ 2 ಕೆಜಿ ಚಿನ್ನ ನಾಪತ್ತೆ!

ಅರಮನೆಗಳ ನಗರಿಯಲ್ಲಿ ವಿಚಿತ್ರವಾದ ಕಳವು ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಬಾಗಿಲು ಹಾಕಿದ ಮನೆಯಿಂದ 2 ಕೆಜಿ ಚಿನ್ನಾಭರಣ ಕಾಣೆಯಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಮೈಸೂರು: ಅರಮನೆಗಳ ನಗರಿಯಲ್ಲಿ ವಿಚಿತ್ರವಾದ ಕಳವು ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಬಾಗಿಲು ಹಾಕಿದ ಮನೆಯಿಂದ 2 ಕೆಜಿ ಚಿನ್ನಾಭರಣ ಕಾಣೆಯಾಗಿವೆ.

ಮನೆಯ ಮಾಲೀಕ ವಿಜಯ್ ಕುಮಾರ್ ಎಂಬ ಉದ್ಯಮಿ ಕೋವಿಡ್ 19 ಸೋಂಕಿಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.   ಅವರ ತಾಯಿ ಸಹ ಸೋಂಕಿತರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು, ಕುಟುಂಬಕ್ಕೆ ತಿಳಿದಿರುವ ಯಾರಾದರೂ ನಕಲಿ ಕೀಲಿ ಕೈ ಬಳಸಿ ಎರಡು ಕೆಜಿ ಚಿನ್ನ ಕಳವು ಮಾಡಿರಬಹುದು ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. 

ಸರಸ್ವತಿಪುರಂನ ಪೊಲೀಸ್ ಇನ್ಸ್‌ಪೆಕ್ಟರ್ ಮಂಗಳವಾರ ಮನೆಗೆ ಭೇಟಿ ನೀಡಿದ್ದು, ಬೆರಳಚ್ಚು ತಜ್ಞರು ಮತ್ತು ಶ್ವಾನ ದಳವೂ ಸಹ ಪರಿಶೀಲಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com