ರಾಜ್ಯ ಬಂದ್'ಗೆ ಸರ್ಕಾರದ ಅನುಮತಿ ಇಲ್ಲ: ಸಚಿವ ಆರ್.ಅಶೋಕ್

ಕರ್ನಾಟಕ ಬಂದ್ ಗೆ ಸರ್ಕಾರದ ಯಾವುದೇ ಬೆಂಬಲ ಇಲ್ಲ. ಬಂದ್ ಮಾಡುವುದಕ್ಕೂ ಅವಕಾಶ ಇಲ್ಲ. ಯಥಾವತ್ತಾಗಿ ಸರ್ಕಾರಿ ಕಚೇರಿಗಳು, ಟ್ಯಾಕ್ಸಿ, ಬಸ್ ಗಳು ಇರಲಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.
ಸಚಿವ ಆರ್.ಅಶೋಕ್
ಸಚಿವ ಆರ್.ಅಶೋಕ್
Updated on: 

ಬೆಂಗಳೂರು: ಕರ್ನಾಟಕ ಬಂದ್ ಗೆ ಸರ್ಕಾರದ ಯಾವುದೇ ಬೆಂಬಲ ಇಲ್ಲ. ಬಂದ್ ಮಾಡುವುದಕ್ಕೂ ಅವಕಾಶ ಇಲ್ಲ. ಯಥಾವತ್ತಾಗಿ ಸರ್ಕಾರಿ ಕಚೇರಿಗಳು, ಟ್ಯಾಕ್ಸಿ, ಬಸ್ ಗಳು ಇರಲಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಅಂಗಡಿ ಮುಗ್ಗಟ್ಟಗಳು ಎಂದಿನಂತೆ ಓಪನ್ ಇರಲಿವೆ. ಸಾರ್ವಜನಿಕರು ಯಾವುದೇ ಭಯ ಭೀತಿಗೆ ಒಳಗಾಗಬಾರದು. ಸಾರ್ವಜನಿಕರು ಸುಗಮವಾಗಿ ಜೀವನ ನಡೆಸಬಹುದಾಗಿದೆ. ಯಾರಾದರೂ ಕಿಡಿಗೇಡಿಗಳು,ಬಲತ್ಕಾರ,ಕಲ್ಲುತೂರಾಟ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಭೂ ಸುಧಾರಣೆ ಕಾಯ್ದೆಯಿಂದ ರೈತರಿಗೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಎಂದು ವಿಧಾನಸಬೆಯಲ್ಲಿ ಎಳೆ ಎಳೆಯಾಗಿ ತಿಳಿಸಿ ಹೇಳಿದ್ದೇವೆ. ರೈತರೊಂದಿಗೆ ಸಭೆ ಕರೆದೂ ಕೂಡ ಮುಖ್ಯಮಂತ್ರಿಗಳು ಮನವೊಲಿಸಲು ಪ್ರಯತ್ನ ಮಾಡಿದ್ದಾರೆ. ಹೀಗಿದ್ದರೂ ಅನಗತ್ಯವಾಗಿ ಬಂದ್ ಮಾಡುವುದಕ್ಕೆ ಸರ್ಕಾರದ ಅನುಮತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಎಂದಿನಂತೆ ಸರ್ಕಾರಿ ಕಚೇರಿಗಳು, ಟ್ಯಾಕ್ಸಿ, ಬಸ್ಸು ಸೇರಿ ಎಲ್ಲಾ ಸೇವೆಗಳು ಲಭ್ಯವಿರಲಿವೆ, ಅಂಗಡಿ-ಮುಂಗಟ್ಟುಗಳು ಎಂದಿನಂತೆ ತೆರೆದಿರಲಿವೆ. ಸಾರ್ವಜನಿಕರು ಎಂದಿನಂತೆ ನಿರ್ಭೀತಿಯಿಂದ ತಮ್ಮ ಕೆಲಸಗಳಲ್ಲಿ ತೊಡಗಬಹುದು. ಯಾರಾದರೂ ಕಿಡಿಗೇಡಿಗಳು ಬಲವಂತವಾಗಿ ಬಂದ್ ಮಾಡಿಸಲು ಯತ್ನ ನಡೆಸಿದ್ದೇ ಆದರೆ, ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com