ಕೆಜಿಎಫ್ ನಲ್ಲಿ ಗಾಂಜಾ ಘಾಟು!

ಸ್ಯಾಂಡಲ್ವುಡ್ ನ ಡ್ರಗ್ಸ್ ಪ್ರಕರಣ ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಠಿಸಿತ್ತು. ಇದೀಗ ಕೆಜಿಎಫ್ ನಲ್ಲಿ ನೂರಾರು ಕೆಜಿ ಗಟ್ಟಲೆ ಗಾಂಜಾ ಸಿಕ್ಕಿದೆ.
ಕರ್ನಾಟಕ ಪೊಲೀಸರು
ಕರ್ನಾಟಕ ಪೊಲೀಸರು
Updated on: 

ಸ್ಯಾಂಡಲ್ವುಡ್ ನ ಡ್ರಗ್ಸ್ ಪ್ರಕರಣ ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಠಿಸಿತ್ತು. ಇದೀಗ ಕೆಜಿಎಫ್ ನಲ್ಲಿ ನೂರಾರು ಕೆಜಿ ಗಟ್ಟಲೆ ಗಾಂಜಾ ಸಿಕ್ಕಿದೆ. 

ಮನೆಯ ಹಿಂದೆ ನೂತನವಾಗಿ ನಿರ್ಮಿಸಲಾಗಿದ್ದ ಹೊಂಡದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಬರೋಬ್ಬರಿ 1.25 ಕೋಟಿ ಮೌಲ್ಯದ 229 ಕೆಜಿ ಗಾಂಜಾವನ್ನು ಕೆಜಿಎಫ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಈ ತಿಂಗಳ ಮೊದಲ ವಾರದಲ್ಲಿ 1 ಕೋಟಿ ಮೌಲ್ಯದ 186 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿತ್ತು. ಇದೀಗ ಹೊಂಡದಲ್ಲಿದ್ದ ಇನ್ನಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಶ್ರೇಣಿಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ. 

ಮಾರಿಕುಪ್ಪಂ ಪೊಲೀಸ್ ಠಾಣೆಯ ವ್ಯಾಪ್ತಿ ಕೃಷ್ಣಗಿರಿ ಲೇನ್ ನಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾಗ ಗಾಂಜಾ ಸಿಕ್ಕಿತ್ತು. ಈ ಸಂಬಂಧ ಜೋಸೆಫ್ ಮತ್ತು ರಾಜಾ ಎಂಬುವರನ್ನು ಬಂಧಿಸಲಾಗಿದೆ ಎಂದರು. 

ಸೀಮಂತ್ ಕುಮಾರ್ ಸಿಂಗ್ ಅವರು ಇನ್ಸ್ ಪೆಕ್ಟರ್ ಗಳಾದ ಸೂರ್ಯ ಪ್ರಕಾಶ್ ಮತ್ತು ವೆಂಕಟರಮಣಪ್ಪ ಅವರಿಗೆ ಪ್ರಶಂಸನೀಯ ಪತ್ರ ನೀಡಿದ್ದಾರೆ. ಇದೇ ವೇಳೆ ಪೊಲೀಸರಾದ ವೆಂಕಟರಮಣಪ್ಪ, ಮಹೇಂದ್ರ, ಚೇತನ್ ಮತ್ತು ರಮೇಶ್ ಅವರಿಗೆ ನಗದು ಬಹುಮಾನ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com