ಬೀದಿಗೆ ಬಂದರೆ ನೀನು, ನಿನ್ನೆ ಮನೆಗೆ ಬರುವೆ ನಾನು: ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬೆಂಗಳೂರು ಪೊಲೀಸರು

ಕೊರೋನಾ ವೈರಸ್ ರಾಷ್ಟ್ರ ಸೇರಿದಂತೆ ವಿಶ್ವದೆಲ್ಲೆಡೆ ಮರಣ ಮೃದಂಗ ಸಾರುತ್ತಿದ್ದು, ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಕೇಂದ್ರ ಸರ್ಕಾರ ಇಡೀ ರಾಷ್ಟ್ರದಾದ್ಯಂತ ಲಾಕ್'ಡೌನ್'ಗೆ ಘೋಷಣೆ ಮಾಡಿದೆ. ಆದರೂ, ಸರ್ಕಾರದ ಆದೇಶ ತಿರಸ್ಕರಿಸಿ ಪರಿಜ್ಞಾನವಿಲ್ಲದೆ ರಸ್ತೆಗಳಲ್ಲಿ ತಿರುಗಾಡಲು ಆರಂಭಿಸಿದ್ದಾರೆ...
ಬೀದಿಗೆ ಬಂದರೆ ನನು, ನಿನ್ನೆ ಮನೆಗೆ ಬರುವೆ ನಾನು:ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬೆಂಗಳೂರು ಪೊಲೀಸರು
ಬೀದಿಗೆ ಬಂದರೆ ನನು, ನಿನ್ನೆ ಮನೆಗೆ ಬರುವೆ ನಾನು:ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬೆಂಗಳೂರು ಪೊಲೀಸರು

ಬೆಂಗಳೂರು: ಕೊರೋನಾ ವೈರಸ್ ರಾಷ್ಟ್ರ ಸೇರಿದಂತೆ ವಿಶ್ವದೆಲ್ಲೆಡೆ ಮರಣ ಮೃದಂಗ ಸಾರುತ್ತಿದ್ದು, ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಕೇಂದ್ರ ಸರ್ಕಾರ ಇಡೀ ರಾಷ್ಟ್ರದಾದ್ಯಂತ ಲಾಕ್'ಡೌನ್'ಗೆ ಘೋಷಣೆ ಮಾಡಿದೆ. ಆದರೂ, ಸರ್ಕಾರದ ಆದೇಶ ತಿರಸ್ಕರಿಸಿ ಪರಿಜ್ಞಾನವಿಲ್ಲದೆ ರಸ್ತೆಗಳಲ್ಲಿ ತಿರುಗಾಡಲು ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೆಂಗಳೂರು ಬೆಂಗಳೂರು ಪೊಲೀಸರು ವಿಭಿನ್ನ ರೀತಿಯ ಕ್ರಮಗಳನ್ನು ಕೈಗೊಳ್ಳತ್ತಿದ್ದಾರೆ.

ರಸ್ತೆಗಳಲ್ಲಿ ಬರಹಗಳನ್ನು ಬರೆಸುತ್ತಿರುವ ಪೊಲೀಸರು ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ, ಜನರ ಆರೋಗ್ಯ ಹಿತದೃಷ್ಟಿಯಿಂದ ಪೊಲೀಸರು ಹಗಲು, ರಾತ್ರಿ ಶ್ರಮಿಸುತ್ತಿದ್ದಾರೆ. 

ನಾಗೇನಹಳ್ಳಿ ಚೆಕ್ ಪೋಸ್ಟ್ ಬಳಿಯಿರುವ ರಸ್ತೆಯಲ್ಲಿ ಕೊರೋನಾ ಕುರಿತು ಬರಹ ಬರೆಸಿರುವ ಪೊಲೀಸರು, ಬೀದಿಗೆ ಬಂದರೆ ನೀನು, ನನ್ನ ಮನೆಗೆ ಬರುವೆ ನಾನು ಎಂದು ಹೇಳಿ ಕೊರೋನಾ ವೈರಸ್ ಚಿತ್ರಗಳನ್ನು ಬಿಡಿಸಿಸಿದ್ದಾರೆ. 

ರಾಜ್ಯಯಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ ಈ ವರೆಗೂ 110ಕ್ಕೆ ಏರಿಕೆಯಾಗಿದೆ. ಅಲ್ಲದೆ, ಮೂವರು ವೈರಸ್'ಗೆ ಬಲಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com