ಅನ್'ಲಾಕ್ 3.0: ರಾಜ್ಯದಲ್ಲಿ ಜಿಮ್, ಯೋಗಾ ಸಂಸ್ಥೆಗಳು ಪುನರಾರಂಭ

ಅನ್'ಲಾಕ್ 3.0 ಆ.5 ರಿಂದ ಜಾರಿಗೆ ಬಂದಿದ್ದು, ಯೋಗ, ಜಿಮ್ ಸಂಸ್ಥೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಇಷ್ಟು ದಿನ ಸಂಕಷ್ಟಕ್ಕೆ ಸಿಲುಕಿದ್ದ ಯೋಗ ಹಾಗೂ ಜಿಮ್ ಸಂಸ್ಥೆಗಳ ಮಾಲೀಕರಿಗೆ ನಿರಾಳ ಸಿಕ್ಕಂತಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅನ್'ಲಾಕ್ 3.0 ಆ.5 ರಿಂದ ಜಾರಿಗೆ ಬಂದಿದ್ದು, ಯೋಗ, ಜಿಮ್ ಸಂಸ್ಥೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಇಷ್ಟು ದಿನ ಸಂಕಷ್ಟಕ್ಕೆ ಸಿಲುಕಿದ್ದ ಯೋಗ ಹಾಗೂ ಜಿಮ್ ಸಂಸ್ಥೆಗಳ ಮಾಲೀಕರಿಗೆ ನಿರಾಳ ಸಿಕ್ಕಂತಾಗಿದೆ. 

ಕಂಟೈನ್ಮೆಂಟ್ ಝೋನ್ ಹೊರತುಪಡಿ ಉಳಿದೆಲ್ಲಾ ಪ್ರದೇಶಗಳಲ್ಲಿ ಅನ್'ಲಾಕ್ 3.0 ಜಾರಿಗೆ ಬರಲಿದೆ. ಕಂಟೈನ್ಮೆಂಟ್ ಜೋನ್ ಗಳಲ್ಲಿ ಮಾತ್ರ ಲಾಕ್ಡೌನ್'ನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. 

ಇನ್ನು ಪುನರಾರಂಭಗೊಳ್ಳುವ ಜಿಮ್ ಹಾಗೂ ಯೋಗ ಸಂಸ್ಥೆಗಳಲ್ಲಿ ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. 

ಕರ್ನಾಟಕ ಜಿಮ್ ಮಾಲೀಕರ ಸಂಘದ ಕಾರ್ಯದರ್ಶಿ ಪ್ರಸಾದ್ ಕುಮಾರ್ ಅವರು ಮಾತನಾಡಿ, ಜಿಮ್ ಗಳು ಬಂದ್ ಆಗಿ 4 ತಿಂಗಳುಗಳು ಕಳೆದಿವೆ. ಜಿಮ್ ಗಳನ್ನು ಬಂದ್ ಮಾಡಿದ ಹಿನ್ನೆಲೆಯಲ್ಲಿ ನಗದಲ್ಲಿದ್ದ 30-40 ಜಿಮ್ಗಳು ಶಾಶ್ವತವಾಗಿ ಬಾಗಿಲು ಮುಚ್ಚುವಂತೆ ಮಾಡಿದೆ ಎಂದು ಹೇಳಿದ್ದಾರೆ. 

ಜಿಮ್ ಗಳನ್ನು ನಡೆಸಲು ರೂ.1ಲಕ್ಷ ಬಾಡಿಗೆ ನೀಡಬೇಕಿತ್ತು. ಲಾಕ್ಡೌನ್ ಪರಿಣಾಮ ಬಾಡಿಗೆ ಕಟ್ಟಲು ಸಾಧ್ಯವಾಗದೆ ಹಲವು ಶಾಶ್ವತವಾಗಿ ಬಾಗಿಲು ಮುಚ್ಚಿದರು. ಈಗಲೂ ಹಲವರು ಸಂಕಷ್ಟದಲ್ಲಿದ್ದಾರೆ. ಜಿಮ್ ಗಳನ್ನು ತೆರೆಯಲು ಮೊದಲೇ ಸರ್ಕಾರ ಅನುಮತಿ ನೀಡಬೇಕಿತ್ತು ಎಂದು ತಿಳಿಸಿದ್ದಾರೆ. 

ಮುಂಜಾಗ್ರತಾ ಕ್ರಮವಾಗಿ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವ ಅಗತ್ಯವಿದಗೆ. ಲಾಕ್ಡೌನ್ ಸಂದರ್ಭದಲ್ಲಿ ನಾನು ಆನ್ಲೈನ್ ಸೆಷನ್ಸ್ ನಡೆಸಿದ್ದೆ. ಇದರಲ್ಲಿ 18-25 ಮಂದಿ ಭಾಗಿಯಾಗಿದ್ದರು. ಫಿಟ್ ಆಗಿರಲು ಜನರು ಜಿಮ್ ಗೆ ಬರಲು ಕಾತುರದಿಂದ ಇದ್ದರು ಎಂದು ಇಂದಿರಾನಗರದಲ್ಲಿ ಜಿಮ್್ ನಡೆಸುತ್ತಿರುವ ಸುಹೈಲ್ ಎಂಬುವವರು ಹೇಳಿದ್ದಾರೆ. 

ಜಿಮ್ ಆರಂಭಕ್ಕೆ ಅನುಮತಿ ನೀಡಿರುವುದು ಖುಷಿ ತಂದಿದೆ. ಆದರೆ, ಜನರ ಎಷ್ಟರ ಮಟ್ಟಿಗೆ ಬರುತ್ತಾರೆ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದರ ಬಗ್ಗೆ ಆತಂಕವಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com