ರಾಜ್ಯದಲ್ಲಿ ಕೊರೋನಾ ಸ್ಫೋಟ: ಹಾಟ್'ಸ್ಪಾಟ್, ಕ್ಲಸ್ಟರ್ಸ್ ಝೋನ್'ಗಳ ಸೀಲ್'ಡೌನ್'ಗೆ ಸರ್ಕಾರ ನಿರ್ಧಾರ

ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ವ್ಯಾಪಾರ ವಹಿವಾಟು ಸ್ಥಳವಾದ ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ, ಮಾರುಕಟ್ಟೆ ಒಳಗೊಂಡಿರುವ ನಾಲ್ಕು ವಾರ್ಡ್ ಗಳ ಆಯ್ದ ಪ್ರದೇಶಗಳನ್ನು ಸೀಲ್'ಡೌನ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ವ್ಯಾಪಾರ ವಹಿವಾಟು ಸ್ಥಳವಾದ ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ, ಮಾರುಕಟ್ಟೆ ಒಳಗೊಂಡಿರುವ ನಾಲ್ಕು ವಾರ್ಡ್ ಗಳ ಆಯ್ದ ಪ್ರದೇಶಗಳನ್ನು ಸೀಲ್'ಡೌನ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. 

ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. 

ದಕ್ಷಇಣ ವಲಯದ ಮೂರು ವಾರ್ಡ್ ಗಳಾದ ಸಿದ್ಧಾಪುರ, ವಿಶ್ವೇಶ್ವರಪುರ, ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್'ನ ಸೋಂಕಿತರು ಇರುವ ಪ್ರದೇಶಗಳನ್ನು ಸೀಲ್'ಡೌನ್ ಮಾಡಲಾಗುತ್ತಿದೆ. 

ಜೊತೆಗೆ ಹೆಚ್ಚು ಜನದಟ್ಟಣೆ ಉಂಟಾಗುವ ಕೆ.ಆರ್.ಮಾರುಕಟ್ಟೆ ಸೀಲ್'ಡೌನ್ ಮಾಡಲಾಗುತ್ತಿದೆ. ಹಾಗೆಂದು ಇಡೀ ವಾರ್ಡ್ ಸೀಲ್ಡೌನ್ ಮಾಡುವುದಿಲ್ಲ. ಬದಲಾಗಿ ಹೆಚ್ಚು ಸೋಂಕು ಕಂಡು ಬಂದಿರುವ ಆಯ್ದ ಪ್ರದೇಶ, ರಸ್ತೆಗಳನ್ನು ಮಾತ್ರ ಸೀಲ್'ಡೌನ್ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com