ಅಧಿಕಾರಿಗಳ ನಿರ್ಲಕ್ಷ್ಯ: ಆ್ಯಂಬುಲೆನ್ಸ್ ಗಾಗಿ ರಸ್ತೆಯಲ್ಲಿ 5 ತಾಸು ಕಾದು ನಿಂತ ಕೊರೋನಾ ಪೀಡಿತ ಪೊಲೀಸರು!

ಕೊರೋನಾ ಪಾಸಿಟಿವ್ ಬಂದಿದ್ದ ಗೃಹ ರಕ್ಷಕ ದಳದ ಐವರು ಪೊಲೀಸರು ಆಂಬುಲೆನ್ಸ್ ಗಾಗಿ ಬರೋಬ್ಬರಿ 5 ಗಂಟೆಗಳ ಕಾಲ ರಸ್ತೆಯಲ್ಲಿಯೇ ಕಾದು ನಿಂತಿದ್ದ ಘಟನೆ ಮಂಗಳೂರಿನ ಉಲ್ಲಾಳ ನಿಲ್ದಾಣದಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಕೊರೋನಾ ಪಾಸಿಟಿವ್ ಬಂದಿದ್ದ ಗೃಹ ರಕ್ಷಕ ದಳದ ಐವರು ಪೊಲೀಸರು ಆಂಬುಲೆನ್ಸ್ ಗಾಗಿ ಬರೋಬ್ಬರಿ 5 ಗಂಟೆಗಳ ಕಾಲ ರಸ್ತೆಯಲ್ಲಿಯೇ ಕಾದು ನಿಂತಿದ್ದ ಘಟನೆ ಮಂಗಳೂರಿನ ಉಲ್ಲಾಳ ನಿಲ್ದಾಣದಲ್ಲಿ ನಡೆದಿದೆ. 

ಈ ಕುರಿಕು ಪ್ರತಿಕ್ರಿಯೆ ನೀಡಿರುವ ಸೋಂಕು ಪೀಡಿತ ಪೊಲೀಸರು, ಆ್ಯಂಬುಲೆನ್ಸ್ ರವಾನಿಸದ ಜಿಲ್ಲಾ ಆಡಳಿತದ ಮಂಡಳಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಆ್ಯಂಬುಲೆನ್ಸ್ ಗಾಗಿ ನಾವಿಲ್ಲಿ 5 ಗಂಟೆಗಳಿಂದ ಕಾಯುತ್ತಿದ್ದೇವೆ. ಬಹಳ ಬೇಸರವಾಗುತ್ತಿದೆ. ಇಂತಹ ಸಾಂಕ್ರಾಮಿಕ ಸಂದರ್ಭದಲ್ಲಿಯೂ ನಾವು ಹಗಲು, ರಾತ್ರಿ ಎನ್ನದೆ ದುಡಿಯುತ್ತಿದ್ದೇವೆ. ವೈರಸ್ ಹರಡುವುದನ್ನು ತಪ್ಪಿಸುವ ಸಲುವಾಗಿ ಕುಟುಂಬದಿಂದಲೂ ದೂರವಿದ್ದೇವೆ. ಠಾಣೆಯಲ್ಲಿದ್ದ 12 ಮಂದಿ ಪೊಲೀಸರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆಂದು ಹೇಳಿದ್ದಾರೆ. 

ಠಾಣೆಯ ಇನ್ಸ್'ಪೆಕ್ಟರ್ ಒಬ್ಬರಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿತ್ತು. ಕೂಡಲೇ ಉಲ್ಲಾಳ ಆರೋಗ್ಯ ಕೇಂದ್ರದಲ್ಲಿ 40 ಪೊಲೀಸರು ಅಧಿಕಾರಿಗಳು ಕೊರೋನಾ ಪರೀಕ್ಷಣೆ ಮಾಡಿಸಿಕೊಂಡಿದ್ದರು. ಇದರ ವೈದ್ಯಕೀಯ ವರದಿ ಸೋಮವಾರ ಬಂದಿದ್ದು, ಎಲ್ಲರಲ್ಲೂ ಕೊರೋನಾ ದೃಢಪಟ್ಟಿದೆ. ವೈದ್ಯಕೀಯ ವರದಿ ಬರುತ್ತಿದ್ದಂತೆಯೇ ನಾವು ಉಲ್ಲಾಳ ನಿಲ್ದಾಣಕ್ಕೆ ಬೆಳಿಗ್ಗೆ 11.30ಕ್ಕೆ ಬಂದೆವು. ನಮ್ಮನ್ನು ನಿಟ್ಟೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ನಂತರ ಅಲ್ಲಿಂದ ಇಎಸ್ಐ ಆಸ್ಪತ್ರೆ ಅಥವಾ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದರು. ಬೆಳಿಗ್ಗೆ 11.30ರಿಂದ ನಾವು ಆ್ಯಂಬುಲೆನ್ಸ್ ಗಾಗಿ ಕಾಯುತ್ತಿದ್ದು, ಸಂಜೆ 4.30ರ ಸುಮಾರಿಗೆ ಆ್ಯಂಬುಲೆನ್ಸ್ ಬಂದಿತ್ತು. 

ಐದು ಮಂದಿ ಪೊಲೀಸರಲ್ಲೂ ಲಕ್ಷಣ ರಹಿತ ವೈರಸ್ ಪತ್ತೆಯಾಗಿದ್ದು, ಇದೀಗ ಎಲ್ಲರಿಗೂ ಯೆನೆಪೊಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಸಾಕಷ್ಟು ಪೊಲೀಸರ ವೈದ್ಯಕೀಯ ವರದಿ ಬರಬೇಕಿತ್ತು. ಆತಂಕ ಮತ್ತಷ್ಟು ಹೆಚ್ಚಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com