ಪಕ್ಷ ಭೇದ ಮರೆತು ಪ್ರಧಾನಿ ಮೋದಿ 'ಜನತಾ ಕರ್ಫ್ಯೂ' ಕರೆಗೆ ಬೆಂಬಲ ನೀಡಿದ ರಾಜಕೀಯ ನಾಯಕರು

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನತಾ ಕರ್ಫ್ಯೂ ಕರೆಗೆ ಕೇವಲ ರಾಷ್ಟ್ರದ ಜನತೆಯಷ್ಟೇ ಅಲ್ಲ, ಪಕ್ಷ ಭೇದ ಮರೆತ ವಿವಿಧ ರಾಜಕೀಯ ಪಕ್ಷಗಳ ನಾಯಕರೂ ಕೂಡ ಬೆಂಬಲ ನೀಡಲು ಮುಂದಾಗಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನತಾ ಕರ್ಫ್ಯೂ ಕರೆಗೆ ಕೇವಲ ರಾಷ್ಟ್ರದ ಜನತೆಯಷ್ಟೇ ಅಲ್ಲ, ಪಕ್ಷ ಭೇದ ಮರೆತ ವಿವಿಧ ರಾಜಕೀಯ ಪಕ್ಷಗಳ ನಾಯಕರೂ ಕೂಡ ಬೆಂಬಲ ನೀಡಲು ಮುಂದಾಗಿದ್ದಾರೆ. 

ಮಾರ್ಚ್ 22 ರಂದು ಪ್ರಧಾನಿ ಮೋದಿಯವರು ಜನತಾ ಕರ್ಫ್ಯೂಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮಾರ್ಚ್.22ರಂದು ಇದ್ದ ತಮ್ಮೆಲ್ಲಾ ಕಾರ್ಯಕ್ರಮಗಳನ್ನು ರದ್ದು ಪಡಿಸಿದ್ದು, ಮನೆಯಲ್ಲಿಯೇ ಕಾಲ ಕಳೆಯಲು ನಿರ್ಧರಿಸಿದ್ದಾರೆಂದು ವರದಿಗಳು ತಿಳಿಸಿವೆ. 

ಫ್ರಧಾನಮಂತ್ರಿಗಳ ನಿರ್ಧಾರವನ್ನು ಮಾಜಿ ಪ್ರಧಾನಿ ದೇವೇಗೌಡ ಅವರು ಸ್ವಾಗತಿಸಿದ್ದು, ರಾಜ್ಯದ ಜನತೆ ಬಳಿ ಮನವಿ ಮಾಡಿಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆ 78 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಹೊರಗೆ ಬಾರದಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ಪ್ರಧಾನಮಂತ್ರಿಗಳ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಧನ್ಯವಾದ ಹೇಳಿರುವ ಮೋದಿಯವರ ನಿರ್ಧಾರವನ್ನು ಕೊಂಡಾಡಿದ್ದಾರೆ. 

ಜನತಾ ಕರ್ಫ್ಯೂ ಯಶಸ್ವಿಗೊಳ್ಳುವಂತೆ ಮಾಡಲು ಮೋದಿಯವರ ಸೂಚನೆಗಳನ್ನು ಅನುಸರಿಸಿ, ಮನೆಗಳಲ್ಲಿಯೇ ಇರುವಂತೆ ದೇವೇಗೌಡ ಜನತೆ ಬಳಿ ಮನವಿ ಮಾಡಿಕೊಂಡಿದ್ದಾರೆ. 

ಈ ನಡುವೆ ನಿಖಿಲ್ ಕುಮಾರಸ್ವಾಮಿಯವರ ಮದುವೆ ತಯಾರಿಯಲ್ಲಿ ಬಿಝಿಯಾಗಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿಯವರು ಕೂಡ, ಭಾನುವಾರ ನಡೆಯಬೇಕಿದ್ದ ಮದುವೆ ಕಾರ್ಯಗಳನ್ನು ಪಕ್ಕಕ್ಕಿಟ್ಟು ಮನೆಯಲ್ಲಿಯೇ ಕಾಲ ಕಳೆಯಲು ನಿರ್ಧರಿಸಿದ್ದಾರೆ. 

ಇದರಂತೆ ಭಾನುವಾರ ಹಾಸನಕ್ಕೆ ಭೇಟಿ ನೀಡಬೇಕಿದ್ದ ಡಿಕೆ.ಶಿವಕುಮಾರ್ ಅವರು ಕೂಡ ಭೇಟಿ ಕಾರ್ಯಕ್ರಮವನ್ನು ರದ್ದು ಪಡಿಸಿದ್ದು, ಭಾನುವಾರ ಮನೆಯಿಂದ ಹೊರಬರದಂತೆ ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. 

ಭಾನುವಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗದಗ ಜಿಲ್ಲೆಗೆ ಭೇಟಿ ನೀಡಬೇಕಿತ್ತು. ಆದರೆ, ಅವರೂ ಕೂಡ ಭಾನುವಾರದ ತಮ್ಮೆಲ್ಲಾ ಕಾರ್ಯಕ್ರಮಗಳನ್ನು ರದ್ದು ಪಡಿಸಿದ್ದಾರೆ. 

ಈ ನಡುವೆ ಸಿಎಂ ಯಡಿಯೂರಪ್ಪ ಅವರು ತಮ್ಮೆಲ್ಲಾ ಸಂಪುಟ ಸಚಿವರಿಗೆ ಭಾನುವಾರದ ಕಾರ್ಯಕ್ರಮಗಳನ್ನು ರದ್ದು ಪಡಿಸುವಂತೆ ಸೂಚನೆ ನೀಡಿದ್ದು, ಮನೆಗಳಲ್ಲಿರುವಂತೆ ತಿಳಿಸಿದ್ದಾರೆಂದು ತಿಳಿದುಬಂದಿದೆ. ಈ ನಡುವೆ ಭದ್ರತೆ ಹಿನ್ನೆಲೆಯಲ್ಲಿ ಗನ್ ಮ್ಯಾನ್ ಗಳಿಗೆ ಮಾತ್ರ ಕಾರ್ಯ ಮುಂದುವರೆಸುವಂತೆ ಸೂಚಿಸಿದ್ದಾರೆ. 

ಇದರಂತೆ ಜಲಸಂಪನ್ಮೂಲ ಸಚಿನ ರಮೇಶ್ ಜಾರಕಿಹೊಳಿ, ಬಿಸಿ ಪಾಟೀಲ್ ಅವರು ಮೋದಿಯವರಿಗೆ ಬೆಂಬಲ ನೀಡಿ,ಸ ಜನತಾ ಕರ್ಫ್ಯೂ ಯಶಸ್ವಿಗೊಳ್ಳುವಂತೆ ಮಾಡುವುದಾಗಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com