ಲಾಕ್ ಡೌನ್: ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ಬೆಂಗಳೂರಿಗರು ಆನ್​ಲೈನ್​ನಲ್ಲೇ ಪಡೆಯಬಹುದು ಕರ್ಫ್ಯೂ ಪಾಸ್

ಕೊರೊನಾ ಸೋಂಕು ತಡೆಗಟ್ಟಲು 21ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ಅಗತ್ಯ ವಸ್ತು ಪೂರೈಕೆ, ಡೋರ್ ಡೆಲಿವರಿ ಬಾಯ್ಸ್‌ಗೆ ಪಾಸ್ ನೀಡಲಾಗುತ್ತಿದೆ.‌‌ ಇತ್ತೀಚೆಗೆ‌  ನಗರದ ಡಿಸಿಪಿ ಕಚೇರಿಗಳಲ್ಲಿ ಪಾಸ್ ವಿತರಿಸಲಾಗುತ್ತಿತ್ತು.
ಪೊಲೀಸರು
ಪೊಲೀಸರು

ಬೆಂಗಳೂರು: ನಗರ ಪೊಲೀಸರಿಂದ KAP CLEAR ಇ -ಪಾಸ್ ಬಿಡುಗಡೆಗೊಳಿಸಲಾಗಿದೆ.

ಕೊರೊನಾ ಸೋಂಕು ತಡೆಗಟ್ಟಲು 21ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ಅಗತ್ಯ ವಸ್ತು ಪೂರೈಕೆ, ಡೋರ್ ಡೆಲಿವರಿ ಬಾಯ್ಸ್‌ಗೆ ಪಾಸ್ ನೀಡಲಾಗುತ್ತಿದೆ.‌‌ ಇತ್ತೀಚೆಗೆ‌  ನಗರದ ಡಿಸಿಪಿ ಕಚೇರಿಗಳಲ್ಲಿ ಪಾಸ್ ವಿತರಿಸಲಾಗುತ್ತಿತ್ತು. ಆದರೆ, ಈ ಸಂದರ್ಭದಲ್ಲಿ  ಪಾಸ್ ಕೌಂಟರ್  ಹತ್ತಿರ ಭಾರಿ ಜನದಟ್ಟಣೆ ನಿರ್ಮಾಣವಾಗಿತ್ತು. ಕೊರೊನಾ ಸೋಂಕು  ತಡೆಗಟ್ಟಲು ಮುಖ್ಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೇ ಅಗತ್ಯವಾಗಿರುವುದರಿಂದ ಇ-ಪಾಸ್ ನೀಡಲು ನಗರ ಪೊಲೀಸ್ ಇಲಾಖೆ ನಿರ್ಧರಿಸಿದೆ‌.

ಅವಶ್ಯಕತೆ ಇದ್ದವರು https://kspclearpass.mygate.com/signup ಈ ವೆಬ್ ಸೈಟ್ ನಲ್ಲಿ ಲಾಗ್ ಇನ್  ಆಗುವುದರ ಮೂಲಕ KAP CLEAR ಇ- ಪಾಸ್ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com