ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಾವಿನ ಪ್ರಮಾಣ ಶೇ.1ಕ್ಕೆ ಇಳಿಕೆ

ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೊರೋನಾ ಸೋಂಕು ಹಾಗೂ ಸಾವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಸರಾಸರಿ ಶೇ.11.25ರಷ್ಟಿರುವ ಕೊರೋನಾ ಪಾಸಿಟಿವಿಟಿ ದರ ಕಳೆದ ಒಂದು ವಾರದ ಪ್ರಕರಣಗಳಲ್ಲಿ ಶೇ.6.51ಕ್ಕೆ ಕುಸಿದಿದೆ. ಅಲ್ಲದೆ, ಕೊರೋನಾ ಸೋಂಕಿತರ ಸಾವಿನ ಪ್ರಮಾಣ ಶೇ.1ಕ್ಕೆ ಇಳಿಕೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೊರೋನಾ ಸೋಂಕು ಹಾಗೂ ಸಾವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಸರಾಸರಿ ಶೇ.11.25ರಷ್ಟಿರುವ ಕೊರೋನಾ ಪಾಸಿಟಿವಿಟಿ ದರ ಕಳೆದ ಒಂದು ವಾರದ ಪ್ರಕರಣಗಳಲ್ಲಿ ಶೇ.6.51ಕ್ಕೆ ಕುಸಿದಿದೆ. ಅಲ್ಲದೆ, ಕೊರೋನಾ ಸೋಂಕಿತರ ಸಾವಿನ ಪ್ರಮಾಣ ಶೇ.1ಕ್ಕೆ ಇಳಿಕೆಯಾಗಿದೆ. 

ವಾರ್ ರೂಮ್ ನೀಡಿರುವ ಮಾಹಿತಿಗಳ ಪ್ರಕಾರ, ಜುಲೈ ನಲ್ಲಿ ಶೇ.1.9ರಷ್ಟಿದ್ದ ಸಾವಿನ ಪ್ರಮಾಣ ಆಗಸ್ಟ್ ತಿಂಗಳಿನಲ್ಲಿ ಶೇ.1.5ಕ್ಕೆ ತಲುಪಿತ್ತು. ನಂತರ ಆಗಸ್ಟ್ ತಿಂಗಳಿನಲ್ಲಿ ಶೇ.1.2ಕ್ಕೆ ತಲುಪಿ ಇದೀಗ ಸೆಪ್ಟೆಂಬರ್ ಮತ್ತು ಅಕ್ಟೋಬರ್ 21ರವರೆಗೂ ಶೇ.1ಕ್ಕೆ ಇಳಿಕೆಯಾಗಿದೆ. 

ಕ್ರಿಟಿಕಲ್ ಕೇರ್ ಸಪೋರ್ಟ್ ಟೀಮ್ (ಸಿಸಿಎಸ್ಟಿ) ಐಸಿಯುವಿನಲ್ಲಿರುವ ಸೋಂಕಿತರ ಮೇಲೆ ನಿಗಾವಹಿಸಿರುವುದರಿಂದ ಸಾವಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. 

ಈ ಮೊದಲು ಆರ್'ಟಿ-ಪಿಸಿಆರ್ ಪರೀಕ್ಷೆಗಳ ಫಲಿತಾಂಶ, ದೀರ್ಘಕಾಲಿಕ ರೋಗಗಳು, ಆಮ್ಲಜನಕದ ಮಟ್ಟವನ್ನು ಆಧರಿಸಿ ಚಿಕಿತ್ಸೆ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತಿತ್ತು. ಆದರೀತ ಸಿಸಿಎಸ್ಟಿ ಚಿಕಿತ್ಸಾ ವಿಧಾನವನ್ನು ಅನುಸರಿಸಲಾಗುತ್ತಿದೆ. ಲ್ಯಾಕ್ಟೇಟ್ ಡಿಹೈಡ್ರೋಜಿನೇಸ್ ಟೆಸ್ಟ್ (ಎಲ್ಡಿಹೆಚ್), ಡಿ-ಡೈಮರ್, ಫೆರಿಟಿನ್, ಐಎಲ್ 6 - ಮತ್ತು ಎಚ್‌ಆರ್‌ಸಿಟಿ (ಹೈ-ರೆಸಲ್ಯೂಷನ್ ಕಂಪ್ಯೂಟೆಡ್ ಟೊಮೊಗ್ರಫಿ) ಮತ್ತು ಎದೆಭಾಗದ ಎಕ್ಸ್'ರೇ ನಡೆಸಿ ಪರೀಕ್ಷೆ ನಡೆಸಲಾಗುತ್ತಿದೆ. ಇವುಗಳ ಫಲಿತಾಂಶದ ಆಧಾರದ ಮೇಲೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸೋಂಕಿತರ ವ್ಯಕ್ತಿಗಳಿಗೆ, ರೆಮ್‌ಡೆಸಿವಿರ್, ಡೆಕ್ಸಮೆಥಾಸೊನ್ ಮತ್ತು ಇತರ ಔಷಧಿಗಳನ್ನು ನೀಡಲಾಗುತ್ತದೆ ”ಎಂದು ಮಣಿಪಾಲ್ ಆಸ್ಪತ್ರೆಯ ವೈಜ್ಞಾನಿಕ ಮಂಡಳಿಯ ಮುಖ್ಯಸ್ಥ ಮತ್ತು ರಾಜ್ಯ ಸಿಸಿಎಸ್‌ಟಿ ಸದಸ್ಯ ಡಾ.ಅನೂಪ್ ಅಮರನಾಥ್ ಹೇಳಿದ್ದಾರೆ. 

ಕೊರೋನಾ ಸೋಂಕಿಗೊಳಗಾದವರಲ್ಲಿ ಲ್ಯಾಕ್ಟೇಟ್ ಡಿಹೈಡ್ರೋಜಿನೇಸ್ ಟೆಸ್ಟ್ ನಿಂದ ಸ್ನಾಯುಗಳಲ್ಲಿರುವ ಉರಿಯೂತ ಕುರಿತು ತಿಳಿಯಬಹುದಾಗಿದೆ, ಡಿ-ಡೈಮರ್ ಪರೀಕ್ಷೆಯು ರಕ್ತ ಹೆಪ್ಪುಗಟ್ಟಿರುವಿಕೆ, ಫೆರಿಟಿನ್ ಮಟ್ಟವು ತೀವ್ರತರವಾದ ಉರಿಯೂತ, ಐಎಲ್ -6 ಉರಿಯೂತದ ಗುರುತಗಳ ಕುರಿತು ತಿಳಿಯಬಹುದಾಗಿದೆ ಎಂದು ಡಾ. ಅನೂಪ್ ವಿವರಿಸಿದ್ದಾರೆ. 

ಎಚ್‌ಆರ್‌ಸಿಟಿ ಮತ್ತು ಎದೆಭಾಗದಲ್ಲಿ ನಡೆಸಲಾಗುವ ಎಕ್ಸ್'ರೇ ಫಲಿತಾಂಶದಿಂದ ಲಕ್ಷಣರಹಿತ ರೋಗಿಗಳ ಪತ್ತೆಗೆ ಸಹಾಯ ಮಾಡುತ್ತದೆ. ಪರೀಕ್ಷೆ ಸಂಖ್ಯೆಯನ್ನು ಹೆಚ್ಚಿಸುತ್ತಿರುವುದರಿಂದಲೂ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ. ಪ್ರಸಕ್ತ ತಿಂಗಳಿನಲ್ಲಿ ಪ್ರತೀನಿತ್ಯ ನಾವು 1 ಲಕ್ಷಕ್ಕಿಂತಲೂ ಹೆಚ್ಚು ಪರೀಕ್ಷೆಯ್ನು ನಡೆಸುತ್ತಿದ್ದೇವೆ. ಜಾಗೃತಿ ಕಾರ್ಯಕ್ರಮಗಳು, ಮಾಸ್ಕ್ ಧಾರಣೆಯ ಪ್ರಾಮುಖ್ಯತೆಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ನರ್ಸ್ ಗಳು ಮತ್ತು ವೈದ್ಯರಿಗೆ ತರಬೇತಿ ನೀಡುತ್ತಿರುವುದೂ ಕೂಡ ಇದಕ್ಕೆ ಕಾರಣವಾವಾಗಿದೆ ಎಂದು ಕೋವಿಡ್ -19 ಕ್ರಿಟಿಕಲ್ ಕೇರ್ ಸಪೋರ್ಟ್ ಟೀಂನ ಮುಖ್ಯಸ್ಥ ಡಾ.ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com