ಬೆಂಗಳೂರು: 7 ತಿಂಗಳುಗಳಲ್ಲಿ 1 ಕೋಟಿ ಜನರಿಗೆ ಕೋವಿಡ್ ಲಸಿಕೆ ವಿತರಣೆ

ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಕೇವಲ 7 ತಿಂಗಳುಗಳಲ್ಲಿ 1 ಕೋಟಿಗೂ ಹೆಚ್ಚು ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಕೇವಲ 7 ತಿಂಗಳುಗಳಲ್ಲಿ 1 ಕೋಟಿಗೂ ಹೆಚ್ಚು ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ. 

ಖಾಸಗಿ ಮತ್ತು ಸರ್ಕಾರಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಹೋರಾಟಗಾರರು, 45 ವರ್ಷ ಮತ್ತು 18-44 ವಯೋಮಾನದವರು ಕೋವಿಶೀಲ್ಡ್, ಕೋವಾಕ್ಸಿನ್ ಮತ್ತು ಸ್ಪುಟ್ನಿಕ್ ಮೊದಲ ಮತ್ತು ಎರಡನೆಯ ಡೋಸ್‌ ಪಡೆದವರು ಇದರಲ್ಲಿ ಸೇರಿದ್ದಾರೆ. 

‘2021ರ ಜ.16ರಂದು  ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ನೀಡುವ ಮೂಲಕ ನಗರದಲ್ಲೂ ಲಸಿಕಾ ಅಭಿಯಾನ ಆರಂಭಗೊಂಡಿತ್ತು. ಕೋವಿಡ್‌ ನಿಯಂತ್ರಣ ಕಾರ್ಯದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಕಾರ್ಯ ಫೆ.8ರಿಂದ ಆರಂಭವಾಗಿತ್ತು. ಸರ್ಕಾರಿ ನೌಕರರು ಈ ಹಂತದಲ್ಲಿ ಲಸಿಕೆ ಪಡೆದಿದ್ದರು. 45 ವರ್ಷ ಮೇಲ್ಪಟ್ಟವರಿಗೆ ಮಾ. 1ರಿಂದ ಲಸಿಕೆ ನೀಡಲಾಗಿದೆ. 18 ವರ್ಷ ಮೇಲ್ಟಟ್ಟವರಿಗೆ ಮೇ 10ರಿಂದ ಲಸಿಕೆ ನೀಡಲಾಗುತ್ತಿದೆ. 

ಈ ವರ್ಷದ ಜನವರಿ 16ರಂದು ಲಸಿಕೆ ಅಭಿಯಾನ ಆರಂಭವಾಗಿದ್ದು, ಅಭಿಯಾನ ಆರಂಭವಾಗಿ 7 ತಿಂಗಳು 9 ದಿನಗಳ ನಂತರ ಲಸಿಕೆ ವಿತರಣೆಯಲ್ಲಿ ಬೆಂಗಳೂರು ನಗರ 1 ಕೋಟಿ ಗಡಿ ದಾಟಿದೆ. 

ನಗರ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1,00,34,598 ಮಂದಿ ಲಸಿಕೆ ಪಡೆದಿದ್ದಾರೆ. ಇವರಲ್ಲಿ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದವರು 24,43,914 ಮಂದಿ ಹಾಗೂ 75,90,684 ಮಂದಿ ಮೊದಲ ಡೋಸ್‌ ಮಾತ್ರ ಪಡೆದವರಾಗಿದ್ದಾರೆ.

ಆರೋಗ್ಯ ಕಾರ್ಯಕರ್ತರಿಗೆ 4,13,415 ಡೋಸ್ ಲಸಿಕೆ, ಮುಂಚೂಣಿ ಹೋರಾಟಗಾರರಿಗೆ 5,79,191 ಡೋಸ್, 45 ವರ್ಷ ಮೇಲ್ಪಟ್ಟವರಿಗೆ 39,78,341 ಮತ್ತು 18 ರಿಂದ 44 ವರ್ಷದೊಳಗಿನವರಿಗೆ 50,63,651 ಡೋಸ್ ಲಸಿಕೆ ನೀಡಲಾಗಿದ್ದು, ನಗರದಲ್ಲಿ ಒಟ್ಟು 1,00,34,598 ಡೋಸ್‌ ಲಸಿಕೆಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. 

ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರು ಮಾತನಾಡಿ, ಪೂರೈಕೆಯ ಮೇಲೆ ಲಸಿಕೆ ವಿತರಣೆ ಅವಲಂಬಿತವಾಗಿರುತ್ತದೆ. ಕೆಲವು ದಿನಗಳಲ್ಲಿ 1 ಲಕ್ಷ ಡೋಸ್ ಗಳಿಂದ 2.1 ಲಕ್ಷ ಡೋಸ್ ಲಸಿಗಳನ್ನೂ ವಿತರಿಸಲಾಗಿದೆ. 18-44 ವರ್ಷದ ಜನರಿಗೆ ಲಸಿಕೆ ನೀಡಲು ಕೇಂದ್ರ ಅನುಮತಿ ನೀಡಿದ ಕೂಡಲೇ ಜನರನ್ನು ಬೀದಿ ಬದಿ ವ್ಯಾಪಾರಿಗಳು, ಕೈದಿಗಳು, ವಿಕಲಚೇತನರು ಹೀಗೆ 23 ವರ್ಗಗಳಾಗಿ ವರ್ಗೀಕರಿಸಿ ಆದ್ಯತೆ ಮೇರೆಗೆ ಲಸಿಕೆ ವಿತರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಯಾರೆಲ್ಲಾ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಪಡೆದಿಲ್ಲವೋ ಅವರು ಮುಂದೆ ಬಂದು ಲಸಿಕೆ ಪಡೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ. 

ಬೆಂಗಳೂರು ನಗರ ಜಿಲ್ಲೆಯ 5 ತಾಲ್ಲೂಕುಗಳು, ಬಿಬಿಎಂಪಿಯ 198 ವಾರ್ಡ್‌ಗಳು, 6 ಪುರಸಭೆಗಳು, 1 ನಗರಸಭೆ, 87 ಗ್ರಾಮ ಪಂಚಾಯಿತಿಗಳ 1038 ಗ್ರಾಮಗಳಲ್ಲಿ ಈ ಲಸಿಕೆಗಳನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಬಿಬಿಎಂಪಿ ಹೊರತುಪಡಿಸಿ ಉಳಿದ ಕಡೆ ಲಸಿಕೆ ವಿತರಣೆಯಲ್ಲಿ ಶೇ 90 ಗುರಿಸಾಧನೆ ಆಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 70 ರಷ್ಟು ಮಂದಿ ಕನಿಷ್ಠ ಪಕ್ಷ ಒಂದು ಡೋಸ್‌ ಲಸಿಕೆ ಪಡೆದಿದ್ದಾರೆ.  

ಇತರೆ ಜಿಲ್ಲೆಗಳಾದ ಬೆಳಗಾವಿಯಲ್ಲಿ 23,56,873, ಮೈಸೂರಿನಲ್ಲಿ 20,83,556, ದಕ್ಷಿಣ ಕನ್ನಡ 14,34,830, ತುಮಕೂರು 14,03,912, ಬಳ್ಳಾರಿ 13,61,791 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com