

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಅಬ್ಬರ ಇಳಿಕೆಯಾಗುತ್ತಿದ್ದು, ನಗರದಲ್ಲಿ ಶನಿವಾರ ಶೂನ್ಯ ಸಾವು ದಾಖಲಾಗಿದೆ.
ಆಗಸ್ಟ್ 23 ರಂದೂ ಕೂಡ ಶೂನ್ಯ ಸಾವು ದಾಖಲಾಗಿತ್ತು. ಆಘಸ್ಟ್ 24 ರಂದು 11 ಸಾವುಗಳು ಸಂಭವಿಸಿತ್ತು. ಆಘಸ್ಟ್ 25 ರಂದು 3 ಸಾವು ಹಾಗೂ ಆಗಸ್ಟ್ 26 ಮತ್ತು 27 ರಕಂದು 2 ಸಾವುಗಳು ಸಂಭವಿಸಿದ್ದವು.
ನಗರದಲ್ಲಿ ನಿನ್ನೆ ಒಟ್ಟು 310 ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಹೊಸ ಪ್ರಕರಣಗಳೊಂದಿಗೆ ನಗರದಲ್ಲಿ ಈ ವರೆಗೆ ಕೊರೋನಾ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 12.36 ಲಕ್ಷಕ್ಕೆ ಏರಿಕೆಯಾಗಿದೆ. ಈ ನಡುವೆ ಮೃತಪಟ್ಟವರ ಸಂಖ್ಯೆ 15,977ಕ್ಕೆ ತಲುಪಿದೆ.