ಕ್ರೈಸ್ತರ ಧಾರ್ಮಿಕ ಗ್ರಂಥಗಳನ್ನು ಸುಟ್ಟ ಪ್ರಕರಣ: ತನಿಖೆಗೆ ಕೋಲಾರ ಎಸ್ ಪಿ ಆದೇಶ

ಕೋಲಾರದ ಶ್ರೀನಿವಾಸಪುರದಲ್ಲಿ ಕ್ರೈಸ್ತರ ಧಾರ್ಮಿಕ ಗ್ರಂಥಗಳನ್ನು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ ಪಿ ಕಿಶೋರ್ ಬಾಬು ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೋಲಾರ: ಕೋಲಾರದ ಶ್ರೀನಿವಾಸಪುರದಲ್ಲಿ ಕ್ರೈಸ್ತರ ಧಾರ್ಮಿಕ ಗ್ರಂಥಗಳನ್ನು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ ಪಿ ಕಿಶೋರ್ ಬಾಬು ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ.

ಪುಸ್ತಕಗಳನ್ನು ಸಮುದಾಯದ ಸದಸ್ಯರಿಗೆ ವಿತರಿಸುವುದನ್ನು ವಿರೋಧಿಸಿದ್ದ ನಾಲ್ಕು ಮಂದಿಯಿದ್ದ ತಂಡ ಮತಾಂತರ ಮಾಡುತ್ತಿದ್ದಾರೆಂದು ಆರೋಪಿಸಿ ಪುಸ್ತಕಗಳನ್ನು ಸುಟ್ಟು ಹಾಕಿದೆ ಎಂದು ಆಪಾದಿಸಲಾಗಿದೆ

ಘಟನೆ ಸಂಬಂಧ ಕೇಂದ್ರ ಐಜಿಪಿ ವಲಯ ವರದಿ ನೀಡುವಂತೆ ಸೂಚಿಸಿದ್ದು, ಕಿಶೋರ್ ಬಾಬು ವರದಿ ರವಾನಿಸಿದ್ದಾರೆ. ಘಟನೆಯ ಬಗ್ಗೆ ಹಿಂದೂ ಅಥವಾ ಕ್ರಿಶ್ಚಿಯನ್ ಸಮುದಾಯದ ಯಾರೂ ಯಾವುದೇ ದೂರು ದಾಖಲಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com