ಡಿಕೆ ಸಹೋದರರ ಶತಾಯುಷಿ ಅಜ್ಜಿ ನಿಂಗಮ್ಮ ನಿಧನ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರ ಶತಾಯುಷಿ ಅಜ್ಜಿ ನಿಂಗಮ್ಮ ಅವರು ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದಾರೆ.
ನಿಂಗಮ್ಮ
ನಿಂಗಮ್ಮ
Updated on

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರ ಶತಾಯುಷಿ ಅಜ್ಜಿ ನಿಂಗಮ್ಮ ಅವರು ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದಾರೆ.

ನಿಂಗಮ್ಮ ಅವರಿಗೆ 106 ವರ್ಷ ವಯಸ್ಸಾಗಿದ್ದು, ಇಂದು ಬೆಳಗಿನ ಜಾವ ನಕಪುರದ ಹಾರೋಹಳ್ಳಿಯ ದಯಾನಂದಸಾಗರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬದಿದೆ.

ನಿಂಗಮ್ಮ ಅವರ ಅಂತ್ಯಕ್ರಿಯೆಯನ್ನು ಕನಕಪುರದ ಸಾತನೂರಿನ ದೊಡ್ಡಾಲಹಳ್ಳಿಯಲ್ಲಿ ಇಂದು ಸಂಜೆ 4.30ಕ್ಕೆ ನಡೆಸಲಾಗುತ್ತಿದೆ.

ಈ ನಡುವೆ ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರದ ಕಲಾಪದಲ್ಲಿ ಭಾಗವಹಿಸುವುದನ್ನು ಮೊಟಕುಗೊಳಿಸಿದ್ದು, ಬೆಳಗಾವಿಯಿಂದ 12 ಗಂಟೆ ವಿಮಾನದ ಮೂಲಕ ಬೆಂಗಳೂರಿಗೆ ಬಂದಿಳಿದು ನಂತರ ಅಲ್ಲಿಂದ ದೊಡ್ಡಾಲಹಳ್ಳಿಗೆ ತೆರಳಿ, ಅಜ್ಜಿಯವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com