ಪಾಂಡವಪುರ ಶುಗರ್ ಫ್ಯಾಕ್ಟರಿ ವಿವಾದ: ಸಚಿವ ಮುರುಗೇಶ್ ನಿರಾಣಿ ಪುತ್ರನ ವಿರುದ್ಧ ದೂರು ದಾಖಲು

ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರ ಪುತ್ರ ವಿಜಯ್ ನಿರಾಣಿ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು: ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರ ಪುತ್ರ ವಿಜಯ್ ನಿರಾಣಿ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿದೆ.

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ)ಯನ್ನು 40 ವರ್ಷಗಳವರೆಗೆ ಗುತ್ತಿಗೆ ಪಡೆದಿರುವ ನಿರಾಣಿ ಶುಗರ್ಸ್‌ ಆಡಳಿತ ಮಂಡಳಿ ಕರಾರು ಉಲ್ಲಂಘಿಸಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಮುಖಂಡ ಡಾ.ಎಚ್‌.ಎನ್‌.ರವೀಂದ್ರ ಅವರು ನಿರಾಣಿ ಪುತ್ರನ ವಿಜಯ್ ನಿರಾಣಿ ವಿರುದ್ಧ ದೂರು ಸಲ್ಲಿಸಿದ್ದಾರೆ.

ನಿರಾಣಿ ಶುಗರ್ಸ್ ಫ್ಯಾಕ್ಟರಿ ವ್ಯವಸ್ಥಾಪಕ‌ ನಿರ್ದೇಶಕರಾಗಿರುವ ವಿಜಯ್‌ ನಿರಾಣಿ, ಪಾಂಡವಪುರ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಕಾಂಟ್ರ್ಯಾಕ್ಟ್​​ ಅಗ್ರಿಮೆಂಟ್ ನೋಂದಣಿ ಆಗಿಲ್ಲ. ಜತೆಗೆ ಸರ್ಕಾರಕ್ಕೆ 20 ಕೋಟಿ ರೂ. ಠೇವಣಿ ಪಾವತಿಸದ ಆರೋಪದಡಿ ಮೈಸೂರು ಎಸಿಬಿ ಎಸ್‌ಪಿಗೆ ಪಾಂಡವಪುರ ತಾಲೂಕಿನ ಕಾಂಗ್ರೆಸ್ ಮುಖಂಡ ಡಾ. ರವೀಂದ್ರ ದೂರು ನೀಡಿದ್ದಾರೆಂದು ತಿಳಿದುಬಂದಿದೆ. 

ನಿರಾಣಿ ಶುಗರ್ಸ್‌ ವ್ಯವಸ್ಥಾಪಕ ನಿರ್ದೇಶಕ ವಿಜಯ ಎಂ ನಿರಾಣಿ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಮುರುಗೇಶ ನಿರಾಣಿ ಅವರ ಪುತ್ರರಾಗಿದ್ದು ತಂದೆಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಪಿಎಸ್‌ಎಸ್‌ಗೆ ಗುತ್ತಿಗೆ ಕರಾರಿನ 11 ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಗುತ್ತಿಗೆ ಕರಾರು ವೇಳೆ ಆಡಳಿತ ಮಂಡಳಿಯು ಕಾರ್ಖಾನೆಗೆ ಮುಂಗಡವಾಗಿ ರೂ. 20 ಕೋಟಿ ಹಣ ಪವಾತಿಸಬೇಕಾಗಿತ್ತು, ಭದ್ರತಾ ಠೇವಣಿಯಾಗಿ ರೂ. 5 ಕೋಟಿ ಇಡಬೇಕಾಗಿತ್ತು. ಈ ಹಣದಿಂದ 2017ರಿಂದ ನೌಕರರ ಬಾಕಿ ವೇತನ, ಭವಿಷ್ಯ ನಿಧಿ ಪಾವತಿ ಹಾಗೂ ಕಾರ್ಖಾನೆಯ ಸಾಲ ತೀರಿಸಬೇಕಾಗಿತ್ತು. ಗುತ್ತಿಗೆ ಪಡೆದು ವರ್ಷ ಕಳೆದರೂ ಮುಂಗಡ ಹಣ, ಠೇವಣಿ ಹಣ ಪಾವತಿಸಿಲ್ಲ.

ಗುತ್ತಿಗೆ ಒಪ್ಪಂದ ಪೂರ್ಣಗೊಂಡ ನಂತರ 90 ದಿನಗಳ ಒಳಗಾಗಿ ಒಪ್ಪಂದವನ್ನು ಸಕ್ಷಮ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಬೇಕಾಗಿತ್ತು. ಆದರೆ ಗುತ್ತಿಗೆ ಕರಾರು ಈಗಲೂ ನೋಂದಣಿಯಾಗಿಲ್ಲ. ಕಾರ್ಖಾನೆಯನ್ನು ಉನ್ನತದರ್ಜೆಗೇರಿಸಲು ರೂ.24 ಕೋಟಿ ಹಣ ಮೀಸಲಿಡುವ ಷರತ್ತನ್ನೂ ನಿರಾಣಿ ಷುಗರ್ಸ್‌ ಉಲ್ಲಂಘಿಸಿದೆ. ಮೊದಲು ಇದ್ದ ಕಾರ್ಮಿಕರನ್ನು ಮುಂದುವರಿಸಬೇಕಾಗಿತ್ತು, ಆದರೆ 54 ಕಾರ್ಮಿಕರನ್ನು ವಜಾಗೊಳಿಸಿ ಒಪ್ಪಂದ ಮುರಿಯಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com